ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ಳತನ ಸಂಬಂಧಿತ ಪ್ರಕರಣಗಳಲ್ಲಿ ಹಲವು ವರ್ಷಗಳಿಂದ ವಾರೆಂಟ್ ಅಸಾಮಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾನ್ಯ ACJ & JMFC ನ್ಯಾಯಾಲಯ ಬಂಟ್ವಾಳ CC ನಂ:1540/2016 (ಅ.ಕ್ರ:198/2016, ಕಲಂ:457, 380, 411 IPC) ಹಾಗೂ CC ನಂ:806/2017 (ಅ.ಕ್ರ:99/2016, ಕಲಂ:457, 380, 411 IPC) ಪ್ರಕರಣಗಳಲ್ಲಿ ವಾರೆಂಟ್ ಹೊರಡಿಸಲಾಗಿದ್ದ ಗಣೇಶ್ (41), ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ ಮೂಲದ ವ್ಯಕ್ತಿಯನ್ನು ದಿನಾಂಕ 17-09-2025 ರಂದು ನೀರುಮಾರ್ಗ ಪ್ರದೇಶದಲ್ಲಿ ದಸ್ತಗಿರಿ ಮಾಡಲಾಯಿತು.
ಬಂಧಿತನನ್ನು ಅದೇ ದಿನ ಮಾನ್ಯ ACJ & JMFC ನ್ಯಾಯಾಲಯ, ಬಂಟ್ವಾಳ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಸೂಕ್ತ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
👉 ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ತನಿಖಾ ಕಾರ್ಯಾಚರಣೆಯಲ್ಲಿ ಈ ದಸ್ತಗಿರಿ ನಡೆದಿದೆ.
Post a Comment