ಕಡಬ ತಾಲೂಕಿನ ಶಶಿಧರ (ವಯಸ್ಸು 55) ಅವರು ತಮ್ಮ ತೋಟದಲ್ಲೇ ಗೇರುಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ದೂರುದಾರರಾದ ಪತ್ನಿ ಸೀಮಾ (50) ಅವರು ನೀಡಿದ ಮಾಹಿತಿಯಂತೆ, ಸೆಪ್ಟೆಂಬರ್ 7ರಂದು ರಾತ್ರಿ 10 ಗಂಟೆಗೆ ಊಟ ಮಾಡಿ ಮಲಗಿದ ಶಶಿಧರ, ಬೆಳಿಗ್ಗೆ ಮನೆಯಲ್ಲಿ ಕಾಣಿಸದೇ ಹೋದರು. ಬೆಳಗ್ಗೆ 6 ಗಂಟೆಗೆ ಪತ್ನಿ ಎದ್ದಾಗ ಗಂಡ ಮನೆಯಲ್ಲಿ ಇಲ್ಲದ ಕಾರಣ ಮನೆಯ ಪರಿಸರದಲ್ಲಿ ಹುಡುಕಿದರೂ ಪತ್ತೆಯಾಗಲಿಲ್ಲ.
ಪಕ್ಕದ ಮನೆಯ ಲತೀಶ್ ಕುಮಾರ್ ಅವರಿಗೆ ಮಾಹಿತಿ ನೀಡಿದ ಬಳಿಕ ಅವರು ಹುಡುಕಾಟ ನಡೆಸಿದಾಗ, ಶಶಿಧರ ಅವರು ತಮ್ಮ ತೋಟದ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಯಿತು.
ಪತ್ನಿ ಸೀಮಾ ಸ್ಥಳಕ್ಕೆ ತೆರಳಿ ದೃಢಪಡಿಸಿದ್ದು, ಯಾವುದೋ ಕಾರಣಕ್ಕೆ ಮನನೊಂದು ಶಶಿಧರ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಈ ದಾರುಣ ಹೆಜ್ಜೆ ಇಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ: 24/2025, ಕಲಂ 194 BNSS-2023 ಅಡಿ ಪ್ರಕರಣ ದಾಖಲಿಸಲಾಗಿದೆ.
Post a Comment