ನೆಲ್ಯಾಡಿ ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ, ನೆಲ್ಯಾಡಿ ಕರಯೋಗಂ.. ಓಣಂ ದಿನಾಚರಣೆ.

ನೆಲ್ಯಾಡಿ :ಕೆ.ಎನ್.ಎಸ್.ಎಸ್ ಕರಯೋಗಂ ನೇತೃತ್ವ ದಲ್ಲಿಸೆಪ್ಟೆಂಬರ್ 7 ರಂದು ನೆಲ್ಯಾಡಿ ಅಯ್ಯಪ್ಪ ದೇವಸ್ಥಾನದ ಶಬರೀಶ ಕಲಾಮಂದಿರದಲ್ಲಿ ಓಣಂ ಆಚರಣೆ ಮತ್ತು ಸ್ವಜಾತಿ ಬಾಂಧವರಿಗಾಗಿ ಆಟೋ ಸ್ಪರ್ಧೆಗಳು ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

   ಕೆಎನ್ಎಸ್ ನೆಲ್ಯಾಡಿ ಕರಯೋಗಮ್ ಅಧ್ಯಕ್ಷರಾದ ಈ ಶಿವದಾಸನ್ ಪಿಳ್ಳೆ ದೀಪ ಪ್ರಜ್ವಲನೆ ಮಾಡಿದರು, ಕೆಎನ್ಎಸ್ಎಸ್ ನೆಲ್ಯಾಡಿ ಕರಯೋಗಂ ಬೋರ್ಡ್ ಮೆಂಬರ್ ಶ್ರೀ ರಘುನಾಥನ್ ನಾಯರ್ ಮಾತನಾಡಿ ಶುಭಕೋರಿದರು, ಬೋರ್ಡ್ ಮೆಂಬರ್ ವಿನೋದ್ ಕುಮಾರ್ ಕೋಶಾಧಿಕಾರಿ ಉಪೇಂದ್ರ ಕುಮಾರ್, ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಜಾ ವಿನೋದ್,ಮಹಿಳಾ ವಿಭಾಗದ ಕಾರ್ಯದರ್ಶಿ , ಶ್ರೀಜಾ ಸಂದೀಪ್,ಮಾಜಿ ಅಧ್ಯಕ್ಷರಾದ ಉಣ್ಣಿ ಕೃಷ್ಣನ್ ನಾಯರ್. ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ರಾಜೇಶ್ ಕುಮಾರ್ ಸ್ವಾಗತಿಸಿ ಕಾರ್ಯದರ್ಶಿಉದಯ್ ಕುಮಾರ್ ಧನ್ಯವಾದ ಸಮರ್ಪಿಸಿದರು, ನಂತರ .ಎಸ್.ಎಸ್. ಎಲ್. ಸಿ ಮತ್ತು ಪಿ. ಯು. ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ಕರಯೋಗಂ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು, 

ಮದ್ಯಾಹ್ನ ವಿಶೇಷ ಓಣಂ ಭೋಜನ ಓಣ ಸದ್ಯ, ನಂತರ ಆಟೋಟ ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಉಜಿರೆ, ನೆಟ್ಟಣ, ನೆಲ್ಯಾಡಿ, ರೆಖ್ಯ, ಚಾರ್ಮಾಡಿ, ಹಾಗೂ ಕಡಬ ತಾಲೂಕಿನ ಸಮಾಜ ಭಾಂದವರು ಪಾಲ್ಗೊಂಡರು

Post a Comment

Previous Post Next Post