ಸುಳ್ಯ: ಭಾರತೀಯ ಗಡಿಭದ್ರತಾ ಪಡೆಗೆ ಇತ್ತೀಚೆಗೆ ಆಯ್ಕೆಯಾಗಿರುವ ಅರಂತೋಡು ಗ್ರಾಮದ ಬೆದ್ರುಪಣೆ ನಿವಾಸಿ ಕು. ಸುಶ್ಮಿತಾ ಬೆದ್ರುಪಣೆ ಅವರ ಮನೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಭಾನುವಾರ ಭೇಟಿ ನೀಡಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು.
ಯುವತಿಯ ಸಾಧನೆಯನ್ನು ಹೊಗಳಿದ ಶಾಸಕಿ, ಸುಶ್ಮಿತಾ ಅವರು ದೇಶಸೇವೆಗೆ ತೊಡಗುತ್ತಿರುವುದು ಗ್ರಾಮ ಹಾಗೂ ಜಿಲ್ಲೆಯ ಹೆಮ್ಮೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೇಶವ ಅಡ್ತಲೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ ಕಂಜಿಪಿಲಿ, ಅರಂತೋಡು ಸೊಸೈಟಿಯ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸತೀಶ ನಾಯ್ಕ ಅರಂತೋಡು, ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಪುಷ್ಪ ಮೇದಪ್ಪ ಉಳುವಾರು, ಸುಳ್ಯ ಮಂಡಲ ಸಮಿತಿ ಕೋಶಾಧಿಕಾರಿ ಸುಬೋಧ ಶೆಟ್ಟಿ ಮೆನಾಲ, ಭಾರತಿ ಉಳುವಾರು, ಗುತ್ತಿಗೆದಾರ ನವೀನ್ ಚಂದ್ರ ಗುತ್ತು, ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸದಸ್ಯ ಪ್ರಸಾದ್ ಕಾಟೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
Post a Comment