ವಿಟ್ಲ:ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ.

ವಿಟ್ಲ: ವಿಟ್ಲ ಪೊಲೀಸರು ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿ, ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಸೆಪ್ಟೆಂಬರ್ 15ರಂದು ವಿಟ್ಲ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ರವರು ಸಿಬ್ಬಂದಿಗಳೊಂದಿಗೆ ಪೆಟ್ರೋಲ್ ಕರ್ತವ್ಯದಲ್ಲಿ ತೊಡಗಿದ್ದಾಗ, ಬಂದ ಖಚಿತ ಮಾಹಿತಿಯ ಮೇರೆಗೆ ಅಳಿಕೆ ಗ್ರಾಮದ ಎರುಂಬು ರಸ್ತೆಯ ಬಳಿ ದ್ವಿಚಕ್ರ ವಾಹನದೊಂದಿಗೆ ಅನುಮಾನಾಸ್ಪದವಾಗಿ ನಿಂತುಕೊಂಡಿದ್ದ ಮೂವರನ್ನು ತಪಾಸಣೆ ನಡೆಸಿದರು.

ಬಂಧಿತರು:

1. ಸನತ್‌ ಕುಮಾರ್‌ (23), ಮಂಗಳಪದವು, ವಿಟ್ಲ ಕಸಬಾ

2. ಮಹಮ್ಮದ್‌ ರಾಝಿಕ್‌ (23), ವಿಟ್ಲ ಕಸಬಾ

3. ಚೇತನ್‌ (23), ಮಂಗಳಪದವು, ವಿಟ್ಲ ಕಸಬಾ

ಅವರ ಸ್ವಾಧೀನದಿಂದ 6.27 ಗ್ರಾಂ ಗಾಂಜಾ, 3 ಮೊಬೈಲ್‌ ಫೋನ್‌, 1 ಚೂರಿ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ವಿಟ್ಲ ಠಾಣೆಯಲ್ಲಿ ಅ.ಕ್ರ. 126/2025, ಕಲಂ 8(b), 20(b)(ii)(A) NDPS Act ಹಾಗೂ 3(5) BNS 2023ರಡಿ ಪ್ರಕರಣ ದಾಖಲಾಗಿದ್ದು, ತನಿಖೆಯ ವೇಳೆ ಇನ್ನೊಬ್ಬ ಆರೋಪಿಯಾದ ಧ್ಯಾನ್ ಕರ್ಕೆರ (23), ಎರ್ಮೆ ಮಜಲು ನಿವಾಸಿಯನ್ನು ಸಹ ವಶಕ್ಕೆ ಪಡೆಯಲಾಗಿದೆ.

ತನಿಖೆ ಮುಂದುವರಿದಿದ್ದು, ಪ್ರಕರಣದ ಹಿಂದೆ ಇರುವ ಇತರರ ಸಂಪರ್ಕಗಳ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Post a Comment

Previous Post Next Post