ವಿಟ್ಲ: ಮದುವೆ ಕಾರ್ಯಕ್ರಮದಲ್ಲಿ ಇಬ್ಬರ ನಡುವೆ ಘರ್ಷಣೆ – ಇಬ್ಬರ ವಿರುದ್ಧವೂ ಪ್ರಕರಣ ದಾಖಲು .

ವಿಟ್ಲ ಅ. 9:ಶಬೀರ್ ಅಲಿಯಾಸ್ ಚಬ್ಬಿ ಅವರ ನಿಖಾಹ ಕಾರ್ಯಕ್ರಮದ ವೇಳೆ ಇಬ್ಬರ ನಡುವೆ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಎರಡು ವಿಭಿನ್ನ ಪ್ರಕರಣಗಳು ದಾಖಲಾಗಿವೆ.

ಮಾಹಿತಿಯ ಪ್ರಕಾರ, ಪಿರ್ಯಾದಿದಾರ ಅಬುಸಾಲಿ ಆದಂ ಕುಂಞ ಅವರು ನಿಖಾಹ ಕಾರ್ಯಕ್ರಮಕ್ಕೆ ಹೋದ ಸಂದರ್ಭದಲ್ಲಿ, ಅಬ್ದುಲ್ ರಹಿಮಾನ್ ಅವರ ಪ್ರಚೋದನೆಗೆ ರೈಯೀಸ್ ಎಂಬಾತ ರಾಡ್‌ನಿಂದ ಹಣೆಗೆ ಹೊಡೆದು ಗಾಯಪಡಿಸಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಇತರ ಆರೋಪಿಗಳು ಸೇರಿ ಪಿರ್ಯಾದಿದಾರರನ್ನು ನೆಲಕ್ಕೆ ದೂಡಿ ತುಳಿದು, ಕಲ್ಲು ಎಸೆದು ಕಾಲಿಗೆ ಗಾಯಪಡಿಸಿದ್ದಾರೆ ಎಂದು ಹೇಳಲಾಗಿದೆ.

ಶಬೀರ್ ಅವರ ಮದುವೆಗೆ ಪಿರ್ಯಾದಿದಾರರು ಸಹಕರಿಸಿದ್ದೇ ಘಟನೆಯ ಮೂಲ ಕಾರಣ ಎಂದು ಹೇಳಲಾಗಿದ್ದು, ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ:142/2025, ಕಲಂ 118(1), 115(2), 351(2) r/w 190 BNS-2023 ಅಡಿಯಲ್ಲಿ ಪ್ರಕರಣ ದಾಖಲಿಸಿ, ಅಹಮದ್ ರಈಸ್ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಇದರ ನಂತರ, ಆರೋಪಿಯಾದ ಅಹಮದ್ ರಈಸ್ ಅವರೂ ಪಿರ್ಯಾದಿ ನೀಡಿ, ನಿಖಾಹ ಕಾರ್ಯಕ್ರಮದ ಸಂದರ್ಭದಲ್ಲಿ ತಮಗೂ ಹಲ್ಲೆ ನಡೆದಿರುವುದಾಗಿ ಆರೋಪಿಸಿದ್ದಾರೆ. ಈ ದೂರಿನ ಅನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ:144/2025, ಕಲಂ 352, 118(1), 115(2), 351(2) r/w 3(5) BNS-2023 ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.

ಇಬ್ಬರ ದೂರಿನ ಆಧಾರದ ಮೇಲೆ ವಿಟ್ಲ ಪೊಲೀಸ್‌ ತನಿಖೆ ಮುಂದುವರಿಸಿದೆ.

Post a Comment

Previous Post Next Post