ಕುಕ್ಕೆ ಸುಬ್ರಹ್ಮಣ್ಯ ಪಂಜ ಗ್ರಾಮದ ವಾಸು ಭಟ್ ಎಂಬವರು ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಡಿಸೆಂಬರ್ 12ರಂದು ಮುಂಜಾನೆ ನಡೆದಿದೆ.
ಬಳ್ಪ ಸಮೀಪದ ಎಡೋಣಿ ಹೋಲೋ ಬ್ಲಾಕ್ ಎದುರು ರಾಜ್ಯ ಹೆದ್ದಾರಿಯಲ್ಲಿ ಬೆಳಗಿನ ಸುಮಾರು ನಾಲ್ಕುರಿಂದ ಐದು ಗಂಟೆಯ ವೇಳೆಗೆ ವಾಸು ಭಟ್ ಅವರು ತಮ್ಮ ಪಂಜದ ಮನೆಯಿಂದ ಕುಕ್ಕೆ ಸುಬ್ರಹ್ಮಣ್ಯ ಮಠದಲ್ಲಿ ಸರ್ಪಸಂಸ್ಕಾರ ಪೂಜೆ ಮಾಡಲು ಬರುತ್ತಿರುವ ವೇಳೆ ಕಾಡುಪ್ರಾಣಿಯಾದ ಕಡವೆ ಬೈಕ್‌ಗೇ ಅಡ್ಡ ಬಂದ ಪರಿಣಾಮ ಅಪಘಾತ ಸಂಭವಿಸಿದೆ.
ಎಂದು ಸ್ಥಳೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವಾಸು ಭಟ್ ಅವರನ್ನು ಸ್ಥಳೀಯರು ತಕ್ಷಣವೇ ಆಂಬುಲೆನ್ಸ್ ಮೂಲಕ ಪುತ್ತೂರು ಪ್ರಗತಿ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆಗಾಗಿ ಸೇರಿಸಿದರು. ನಂತರ ಹೆಚ್ಚಿನ ತುರ್ತು ಚಿಕಿತ್ಸೆಗೆ ಅವರನ್ನು ಮಂಗಳೂರು ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಕುಟುಂಬದವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಗಂಭೀರ ಗಾಯಗೊಂಡಿರುವ ವಾಸು ಭಟ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Post a Comment