ಸುಬ್ರಹ್ಮಣ್ಯ: ರೋಟರಿ ಕ್ಲಬ್ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಬೆಂಗಳೂರು ಜಾಲಹಳ್ಳಿ, ರೋಟರಿ ಕ್ಲಬ್ ಬೆಂಗಳೂರು ಸೆಂಟ್ರಲ್ ಹಾಗೂ ರೋಟರಿ ಕ್ಲಬ್ ತುರುವೇಕೆರೆ ಇವರ ಸಂಯುಕ್ತ ಯೋಜನೆಯಡಿ ಸ್ಥಳೀಯ ಸರಕಾರಿ ಶಾಲೆಗಳಿಗೆ ಶನಿವಾರ (ಸೆಪ್ಟೆಂಬರ್ 6) ವಿವಿಧ ಕೊಡುಗೆಗಳನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮವು ಎಸ್‌ಎಸ್‌ಪಿಯು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಜರುಗಿತು. ಈ ವೇಳೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಯಾನಿಟರಿ ಪರಿಕರಗಳು, ಅಗ್ನಿ ನಿರೋಧಕ ಸಾಧನಗಳು, ಬೆಂಕಿ ನಂದಿಸುವ ಸಾಧನಗಳು, ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳು ನೀಡಲಾಯಿತು. ಇದೇ ರೀತಿ ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಕಲರ್ ಪ್ರಿಂಟರ್ ಹಾಗೂ ಸ್ಯಾನಿಟರಿ ಸಾಮಾಗ್ರಿಗಳನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಸುಬ್ರಹ್ಮಣ್ಯ ಅಧ್ಯಕ್ಷ ಜಯಪ್ರಕಾಶ್.ಆರ್ ವಹಿಸಿದ್ದರು. ಕುಕ್ಕೆ ದೇವಳದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ, ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರು ಮಾಧವ ಮೂಕಮಲೆ, ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ನಂದಾ ಹರೀಶ್ ಮುಖ್ಯಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ರೋಟರಿ ಜಾಲಹಳ್ಳಿ ಅಧ್ಯಕ್ಷೆ ರಮಣಿ, ಬೆಂಗಳೂರು ಸೆಂಟ್ರಲ್ ಅಧ್ಯಕ್ಷ ಚಂದ್ರಶೇಖರ್, ತುರುವೇಕೆರೆ ರೋಟರಿ ಅಧ್ಯಕ್ಷ ಉಮೇಶ್ ವಿ.ಆರ್, ಸುಬ್ರಹ್ಮಣ್ಯ ರೋಟರಿ ಕಾರ್ಯದರ್ಶಿ ಭವಾನಿ ಶಂಕರ ಪೈಲಾಜೆ, ಪೂರ್ವಾಧ್ಯಕ್ಷ ಲೋಕೇಶ್ ಬಿ.ಎನ್ ಸೇರಿದಂತೆ ಅನೇಕರು ವೇದಿಕೆಯನ್ನು ಅಲಂಕರಿಸಿದ್ದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Post a Comment