ಮಂಗಳೂರು ನಗರ ಪೊಲೀಸರು ಬ್ಯಾಂಕ್ ವಂಚನೆ ಮಾಡಿದ ದೊಡ್ಡ ಜಾಲವನ್ನು ಪತ್ತೆಹಚ್ಚಿ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಲ್ಲಿಕಟ್ಟೆ ಶಾಖೆಯಿಂದ MSME ಯೋಜನೆಯಡಿ ನಕಲಿ ದಾಖಲೆಗಳನ್ನು ಸಲ್ಲಿಸಿ ಸುಮಾರು ₹2 ಕೋಟಿ 50 ಲಕ್ಷ ಸಾಲವನ್ನು ಪಡೆದು ಸ್ವಂತ ಖಾತೆಗಳಿಗೆ ವರ್ಗಾಯಿಸಿ ದುರುಪಯೋಗ ಮಾಡಿರುವ ಆರೋಪವು ಮೂವರ ಮೇಲೆ ಬಂದಿದೆ.
ವಂಚನೆ ಹೇಗೆ ನಡೆದಿದೆ?
M/s Electro World Enterprises ಸಂಸ್ಥೆ ನಕಲಿ ದಾಖಲೆ ಸಲ್ಲಿಸಿ ₹1 ಕೋಟಿ 20 ಲಕ್ಷ ಸಾಲ ಪಡೆದು ಹಣವನ್ನು ಉದ್ದೇಶಿತ ವ್ಯವಹಾರಕ್ಕೆ ಬಳಸದೆ ಬೇರೆ ಖಾತೆಗಳಿಗೆ ವರ್ಗಾಯಿಸಿದೆ.
M/s M H Enterprises ಸಂಸ್ಥೆಯೂ ಇದೇ ರೀತಿಯಲ್ಲಿ ₹1 ಕೋಟಿ 30 ಲಕ್ಷ ಸಾಲ ಪಡೆದು ಬ್ಯಾಂಕ್‌ಗೆ ವಂಚನೆ ಮಾಡಿದೆ.
ಚೀಫ್ ಮ್ಯಾನೇಜರ್, ಎಸ್‌ಬಿಐ ಮಲ್ಲಿಕಟ್ಟೆ ಶಾಖೆಯವರ ದೂರಿನ ಮೇರೆಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಅ.ಕ್ರ 130/2025 ಮತ್ತು 131/2025 ಪ್ರಕರಣಗಳು ದಾಖಲಾಗಿವೆ.
ಬಂಧಿತರು
ಅ.ಕ್ರ 130/2025 ಪ್ರಕರಣದಲ್ಲಿ:
1. ಮುನೀರ್ ಕದಮನ್ ಅಬೂಬಕರ್ (53) – ಉಜ್ಜೋಡಿ, ಪಂಪ್‌ವೆಲ್ ಮಂಗಳೂರು
2. ಹುಸೇನ್.ಪಿ (52) – ನಂದಿಗುಡ್ಡೆ, ಮಂಗಳೂರು
ಅ.ಕ್ರ 131/2025 ಪ್ರಕರಣದಲ್ಲಿ:
1. ಮೊಹಮ್ಮದ್ ಮುಸ್ತಾಫ (27) – ಜೆಪ್ಪು ಮಾರ್ಕೇಟ್ ರೋಡ್, ಮಂಗಳೂರು
ತನಿಖೆಯಲ್ಲಿ, ಮುನೀರ್ ಕದಮನ್ ಅಬೂಬಕರ್ ಇಬ್ಬರೂ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದೆ.
ಮುಂದಿನ ಕ್ರಮ
ಎರಡೂ ಪ್ರಕರಣಗಳನ್ನು ಮುಂದಿನ ತನಿಖೆಗಾಗಿ ಸಿಸಿಬಿ ಮಂಗಳೂರು ಘಟಕಕ್ಕೆ ವರ್ಗಾಯಿಸಲಾಗಿದೆ. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ.
👉 ಮಂಗಳೂರು ನಗರ ಪೊಲೀಸ್ ಆಯುಕ್ತರು ಈ ಕುರಿತು ಮಾಹಿತಿ ನೀಡಿದ್ದಾರೆ.
Post a Comment