ದೇಶದ ಪ್ರಗತಿಗೆ ಕೌಶಲ್ಯಭರಿತ ತರಬೇತಿ ಅವಶ್ಯಕ – ಡೀಕನ್ ಜಾರ್ಜ್ ಕೆ.ಎಂ..

ನೆಲ್ಯಾಡಿ : “ದೇಶದ ಪ್ರಗತಿಗೆ ಕೌಶಲ್ಯ ಭರಿತ ತರಬೇತುದಾರರು ಇಂದು ಅನಿವಾರ್ಯ ಹಾಗೂ ಅತೀ ಹೆಚ್ಚು ಬೇಡಿಕೆಯಿದ್ದಾರೆ. ಪ್ರತಿಯೊಬ್ಬರೂ ತಮ್ಮ ಆಸಕ್ತಿಯ ವೃತ್ತಿಯಲ್ಲಿ ಕಷ್ಟಪಟ್ಟು ಹಾಗೂ ಆಸಕ್ತಿಯಿಂದ ತರಬೇತಿ ಪಡೆದಾಗ ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ.
 ಕೆಲಸವನ್ನು ಪೂಜೆಯಂತೆ ಕಾಣಬೇಕು, ಗೌರವ ಮತ್ತು ಸಮರ್ಪಿತಾ ಭಾವದಿಂದ ವೃತ್ತಿಜೀವನ ನಡೆಸಬೇಕು,” ಎಂದು ಬೆಥನಿ ಐಟಿಐ ಸಂಸ್ಥೆಗೆ ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಬಿಷಪ್ ಪೋಲಿ ಕಾರ್ಪಸ್ ಪಬ್ಲಿಕ್ ಸ್ಕೂಲ್ ಸಂಚಾಲಕರಾದ ಡೀಕನ್ ಜಾರ್ಜ್ ಕೆ.ಎಂ. ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಬೆಥನಿ ವಿದ್ಯಾ ಸಂಸ್ಥೆಯ ಸಂಚಾಲಕರಾದ ರೆ. ಫಾ. ಡಾ. ವರ್ಗಿಸ್ ಕೈಪಿನಡ್ಕ ಓಐಸಿ ಅಧ್ಯಕ್ಷತೆ ವಹಿಸಿದರು. ನಿರ್ದೇಶಕರಾದ ರೆ. ಫಾ. ಜಾರ್ಜ್ ಸ್ಯಾಮುವೆಲ್ ಓಐಸಿ ಹಾಗೂ ಪ್ರಾಚಾರ್ಯರಾದ ಸಜಿ ಕೆ. ತೋಮಸ್ ಶುಭಹಾರೈಸಿದರು.

ತರಬೇತಿ ಅಧಿಕಾರಿ ಜಾನ್ ಪಿ.ಎಸ್ ಅತಿಥಿಗಳನ್ನು ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ಸುನಿಲ್ ಜೋಸೆಫ್ ವಂದಿಸಿದರು. ಕಿ. ತ. ಅಧಿಕಾರಿ ಹರಿಪ್ರಸಾದ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು.

Post a Comment

أحدث أقدم