ನೆಲ್ಯಾಡಿ ವಿವಿ ಕಾಲೇಜಿನಲ್ಲಿ ಜೀವನ ಕೌಶಲ್ಯ ಮತ್ತು ಸಾಮರ್ಥ್ಯ ವರ್ಧನೆ ತರಬೇತು ಕಾರ್ಯಾಗಾರ 🎓✨

ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಜೀವನ ಕೌಶಲ್ಯ ಮತ್ತು ಸಾಮರ್ಥ್ಯ ವರ್ಧನೆ ತರಬೇತು ಕಾರ್ಯಾಗಾರವನ್ನು ಸೆಪ್ಟೆಂಬರ್ 10, 2025 ಬುಧವಾರದಂದು ಕಾಲೇಜು ಸಭಾಂಗಣದಲ್ಲಿ ಜೇಸಿಐ ನೆಲ್ಯಾಡಿ (ಪ್ರಾಂತ್ಯ F, ವಲಯ 15), ಮಹಿಳಾ ಜೇಸಿಐ ಹಾಗೂ ಜೂನಿಯರ್ ಜೇಸಿ ವಿಂಗ್ ಮತ್ತು ಕಾಲೇಜಿನ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ಆಯೋಜಿಸಲಾಯಿತು.

ಈ ಕಾರ್ಯಾಗಾರಕ್ಕೆ ರಾಷ್ಟ್ರೀಯ ಮಟ್ಟದ ಖ್ಯಾತ ಜೇಸಿಐ ಭಾರತ ತರಬೇತುದಾರರಾದ JC Sen. ವೇಣುಗೋಪಾಲ ಎಸ್. ಜೆ. ಅವರು ತರಬೇತುದಾರರಾಗಿ ಪಾಲ್ಗೊಂಡು, ವಿದ್ಯಾರ್ಥಿಗಳಿಗೆ ಜೀವನ ಸಾಧನೆಗೆ ಅಗತ್ಯವಾದ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಪ್ರಾಯೋಗಿಕ ವಿಧಾನಗಳ ಮೂಲಕ ಬೋಧಿಸಿ ಸ್ಪೂರ್ತಿ ತುಂಬಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು JC JFP ಸುಧಾಕರ ಶೆಟ್ಟಿ (ಅಧ್ಯಕ್ಷರು, ಜೇಸಿಐ ನೆಲ್ಯಾಡಿ) ವಹಿಸಿದರು. ಕಾಲೇಜಿನ ಸಂಯೋಜಕರಾದ ಡಾ. ಸುರೇಶ್ ಅವರು ವಿದ್ಯಾರ್ಥಿಗಳಿಗೆ ಈ ತರಬೇತಿಯ ಮಹತ್ವವನ್ನು ತಿಳಿಸಿ, ಅದರ ಪ್ರಯೋಜನವನ್ನು ಪಡೆಯುವಂತೆ ಕರೆ ನೀಡಿದರು.

ಕಾರ್ಯಕ್ರಮವು ಜೇಸಿಐ ವಾಣಿಯೊಂದಿಗೆ ಆರಂಭಗೊಂಡಿತು. ವೇದಿಕೆಯಲ್ಲಿ JC ಪ್ರವೀಣಿ ಶೆಟ್ಟಿ (ಅಧ್ಯಕ್ಷರು, ಮಹಿಳಾ ಜೇಸಿಐ), JC HGF ಸುಚಿತ್ರಾ ಬಂಟ್ರಿಯಾಲ್ (ನಿಕಟಪೂರ್ವ ಅಧ್ಯಕ್ಷರು, ಜೇಸಿಐ), JC ಸುಪ್ರಿತಾ ರವಿಚಂದ್ರ ಹೊಸವೊಕ್ಲು (ಜೊತೆ ಕಾರ್ಯದರ್ಶಿ), ಶ್ರುತಿ (ಯೋಜನಾಧಿಕಾರಿ, ಎನ್ಎಸ್ಎಸ್ ವಿವಿ ಕಾಲೇಜು ನೆಲ್ಯಾಡಿ), JC ವಿನ್ಯಾಸ್ ಬಂಟ್ರಿಯಾಲ್ (ಯೋಜನಾ ನಿರ್ದೇಶಕರು) ಉಪಸ್ಥಿತರಿದ್ದರು.

ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದವರು ದಯಾನಂದ ಬಂಟ್ರಿಯಾಲ್. ಡಾ. ಸೀತಾರಾಮ ಪಿ. ಧನ್ಯವಾದಗಳನ್ನು ಸಲ್ಲಿಸಿದರು. ಕಾರ್ಯಕ್ರಮದ ನಿರ್ವಹಣೆಯಲ್ಲಿ JC ರವಿಚಂದ್ರ ಹೊಸವೊಕ್ಲು ಮತ್ತು ಕಾಲೇಜಿನ ಬೋಧಕೇತರ ಸಿಬ್ಬಂದಿಗಳು ಸಹಕಾರ ನೀಡಿದರು.

Post a Comment

Previous Post Next Post