ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಕಡಂಬು ಕಾರ್ಲ ರಾಮಧ್ವಾರ ಬಳಿ ʼʼಗೋ ಮಾತಾ ಸಂರಕ್ಷಣಾ ಚಳುವಳಿ ಪೆರ್ನೆʼʼ ವತಿಯಿಂದ ಸೆಪ್ಟೆಂಬರ್ 6ರಂದು ಗೋಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು.
ಬೆಳಿಗ್ಗೆ 10:30ರಿಂದ 11:30ರವರೆಗೆ ನಡೆದ ಪ್ರತಿಭಟನೆಯಲ್ಲಿ ಗಣರಾಜ್ ಭಟ್ ಕೆದಿಲ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಸ್ಥಳೀಯವಾಗಿ ಧಾರ್ಮಿಕ ಹಾಗೂ ಸಮುದಾಯಿಕವಾಗಿ ದ್ವೇಷ ಹುಟ್ಟಿಸುವಂತ ಹಾಗೂ ಗುಂಪು–ಗುಂಪುಗಳ ನಡುವೆ ವೈಮನಸ್ಸು ಬೆಳೆಸುವಂತ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಕೇಳಿಬಂದಿದೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 78/2025, ಕಲಂ 353 (2) BNS 2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
إرسال تعليق