ಬಂಟ್ವಾಳ ಗ್ರಾಮಾಂತರದಲ್ಲಿ ಜಾನುವಾರು ಹತ್ಯೆ ಪ್ರಕರಣ: ಆರೋಪಿಯ ಮನೆ/ಅಕ್ರಮ ಕಸಾಯಿಖಾನೆ ಜಪ್ತಿ.

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪುದು ಗ್ರಾಮದ ಮಾರಿಪಳ್ಳ ನಿವಾಸಿ ಹಸನಬ್ಬ ವಿರುದ್ಧ ಜಾನುವಾರು ಕಳವು ಹಾಗೂ ಹತ್ಯೆ ಪ್ರಕರಣದಲ್ಲಿ ತೀವ್ರ ಕ್ರಮ ಕೈಗೊಳ್ಳಲಾಗಿದೆ.
.

ಪೊಲೀಸರ ವರದಿಯ ಪ್ರಕಾರ, ಹಸನಬ್ಬ ವಿರುದ್ಧ ಥಾಣಾ ಅಕ್ರ 123/2025ರಂತೆ ಕಲಂ 303 ಬಿಎನ್‌ಎಸ್‌, ಕಲಂ 4,7,12 ಗೋಸಂರಕ್ಷಣಾ ಕಾಯಿದೆ ಹಾಗೂ 11(ಡಿ) ಗೋಹತ್ಯೆ ನಿಷೇಧ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿ ಮಾನ್ಯ ಎಸಿಜೆ ಮತ್ತು ಜೆಎಮ್‌ಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇದಕ್ಕೂ ಮುನ್ನ 2017 ಹಾಗೂ 2018ರಲ್ಲಿ ಸಹ ಇದೇ ರೀತಿಯ ಗೋ ಕಳ್ಳತನ ಹಾಗೂ ಗೋಹತ್ಯೆ ಪ್ರಕರಣಗಳು ಹಸನಬ್ಬ ವಿರುದ್ಧ ದಾಖಲಾಗಿದ್ದವು.

ಅಕ್ರಮ ಕಸಾಯಿಖಾನೆ ಪತ್ತೆ

ಪೊಲೀಸರ ತನಿಖೆಯಿಂದ, ಹಸನಬ್ಬ ಯಾವುದೇ ಪರವಾನಿಗೆ ಇಲ್ಲದೆ ತನ್ನ ಮನೆಯಲ್ಲಿ ಅಕ್ರಮ ಕಸಾಯಿಖಾನೆ ನಿರ್ಮಿಸಿಕೊಂಡು ಗೋವಧೆ ನಡೆಸುತ್ತಿದ್ದುದಾಗಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಪೊಲೀಸರು ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿ, ಮಂಗಳೂರು ಉಪವಿಭಾಗ ಅವರಿಗೆ ವರದಿ ಸಲ್ಲಿಸಿದರು.
ಅದನ್ವಯವಾಗಿ, **ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಕಲಂ 8(4), 8(5)**ರ ಪ್ರಕಾರ, ದಿನಾಂಕ 25/09/2025 ರಂದು ಪ್ರಕರಣ ಸಂಖ್ಯೆ ಎಂ.ಎ.ಜಿ/ಎಸ್‌ಆರ್‌.44/2025ರಂತೆ **ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಿಪಳ್ಳ ಪಾಡಿ ಮನೆಯ ನಂ. 6-54 ಮತ್ತು 6-54(1)**ಗಳನ್ನು ಜಪ್ತು ಮಾಡಿ ಸರಕಾರದ ವಶಕ್ಕೆ ಪಡೆಯಲಾಗಿದೆ.

ಜಿಲ್ಲೆಯಲ್ಲೇ ಮೊದಲ ಪ್ರಕರಣ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿಯಾಗಿ ಅಕ್ರಮ ಕಸಾಯಿಖಾನೆ ಜಪ್ತಿ ಮಾಡಿ ಸರಕಾರದ ವಶಕ್ಕೆ ಪಡೆಯುವುದು ಇದೇ ಮೊದಲ ಪ್ರಕರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

Previous Post Next Post