ಕಡಬ ಯುವ ಪತ್ರಕರ್ತ ಗಣೇಶ್ ಇಡಾಳ ಬಂಧನ – ಪುತ್ತೂರು ನ್ಯಾಯಾಲಯದಿಂದ ಜಾಮೀನು.

ಕಡಬ: ಟಿಪ್ಪರ್‌ನಲ್ಲಿ ಮಣ್ಣು ಸಾಗಾಟ ಮಾಡುತ್ತಿದ್ದ ವಿಚಾರವನ್ನು ಪ್ರಶ್ನಿಸಿದ ಪತ್ರಕರ್ತನ ವಿರುದ್ಧ ಜೆಸಿಬಿ ಚಾಲಕ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ (ಕಲಂ 126(2), 352, 351(3) BNS) ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವಾರೆಂಟ್ ಹೊರಡಿಸಲಾಗಿತ್ತು. ಇದರಂತೆ ಅಕ್ಟೋಬರ್ 1 ರಂದು ನ್ಯೂಸ್ ಅಪ್‌ಡೇಟ್ ವೆಬ್‌ಸೈಟ್ ನಿರ್ವಾಹಕ, ಯುವ ಪತ್ರಕರ್ತ ಗಣೇಶ್ ಇಡಾಳ ಅವರನ್ನು ಪೊಲೀಸರು ವಶಕ್ಕೆ ಪಡೆದು ಠಾಣಾ ಬಂದಿಕಾನೆಯಲ್ಲಿ ಇರಿಸಿ, ಅ.2 ರಂದು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಅ.3 ರಂದು ಪುತ್ತೂರು ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಹೆಸರಾಂತ ಹಿರಿಯ ವಕೀಲರಾದ ಕೇಶವ ಭೀಮಗುಳಿ, ಈಶ ಹಾಗೂ ವೆಂಕಟ ಕೃಷ್ಣ ಭೀಮಗುಳಿ ಅವರು ವಾದ ಮಂಡಿಸಿದರು.

ಪೋಟೊ ತೆಗೆದ ಯುವಕ ವಶಕ್ಕೆ
ಪತ್ರಕರ್ತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದುಕೊಂಡು ಹೋಗುವ ವೇಳೆ ಕಡಬ ಮುಖ್ಯ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದಾಗ, ಆರೋಪಿಗೆ ಕೈಗೆ ಕೋಳ ತೊಡಿಸಿ ಪೇಟೆಯಲ್ಲಿ ಸುತ್ತಾಡಿಸಿದ ಘಟನೆ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಆತನ ಆಪ್ತರೊಬ್ಬರು ಫೋಟೋ ತೆಗೆಯಲು ಮುಂದಾದರು. ಇದನ್ನು ಗಮನಿಸಿದ ಪೊಲೀಸರು ಆ ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ, ಮೊಬೈಲ್‌ನಲ್ಲಿದ್ದ ಫೋಟೊ ಅಳಿಸಿದ್ದಾಗಿ ತಿಳಿದು ಬಂದಿದೆ.

ಹೈ ವೊಲ್ಟೇಜ್ ಸುದ್ದಿಗಳ ಪತ್ರಕರ್ತ
ಕಡಬ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕ, ಅಕ್ರಮ ಮರಳು ಹಾಗೂ ಮಣ್ಣು ಸಾಗಾಟ ಸೇರಿದಂತೆ ಅನೇಕ ಅಕ್ರಮಗಳ ವಿರುದ್ಧ ಗಣೇಶ್ ಇಡಾಳ ತಮ್ಮದೇ ಶೈಲಿಯಲ್ಲಿ ಸುದ್ದಿಗಳನ್ನು ಪ್ರಕಟಿಸುತ್ತಿದ್ದು, ಇದರಿಂದ ಮೇಲಾಧಿಕಾರಿಗಳ ಗಮನ ಸೆಳೆಯಲಾಗಿತ್ತು. ಒಂದು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಸಿಬ್ಬಂದಿಯನ್ನು ಜೈಲು ಗಟ್ಟುವಲ್ಲಿ ಇವರ ವರದಿ ಪ್ರಮುಖವಾಗಿತ್ತು. ಜನ ನಾಯಕರ ವಿರುದ್ದವೂ ಎಚ್ಚರಿಕೆಯ ಬರಹಗಳನ್ನು ಬರೆದಿದ್ದರಿಂದ ಹಲವರ ಕೆಂಗಣ್ಣಿಗೂ ಗುರಿಯಾಗಿದ್ದರು.

Post a Comment

Previous Post Next Post