ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ನದಿ ಸ್ನಾನ ನಿಷೇಧ ತೆರವು – ಭಕ್ತರಿಗೆ ತೀರ್ಥ ಸ್ನಾನಕ್ಕೆ ಅವಕಾಶ.

ಕುಕ್ಕೆ ಸುಬ್ರಹ್ಮಣ್ಯ;ಅಕ್ಟೋಬರ್ 6:
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪ್ರಸಿದ್ಧ ಕುಮಾರಧಾರ ನದಿ ಸ್ನಾನಘಟ್ಟದಲ್ಲಿ ಭಕ್ತಾಧಿಗಳಿಗೆ ಸ್ನಾನ ಮಾಡುವುದರ ಮೇಲಿನ ನಿಷೇಧವನ್ನು ತೆರವುಗೊಳಿಸಲಾಗಿದೆ.

ಕಡಬ ತಾಲೂಕು ತಹಶೀಲ್ದಾರ್ ಕಚೇರಿಯಿಂದ ಇಂದು (06-10-2025) ಹೊರಡಿಸಿದ ಆದೇಶದಲ್ಲಿ, ಮುಂಗಾರು ಮಳೆಯು ತಗ್ಗಿರುವುದರಿಂದ ಹಾಗೂ ನೀರಿನ ಮಟ್ಟ ಸಾಮಾನ್ಯ ಸ್ಥಿತಿಗೆ ಬಂದಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ತೀರ್ಥ ಸ್ನಾನದ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.

ಹಿಂದಿನ ಮೇ 26ರಂದು ತಹಶೀಲ್ದಾರ್ ಕಚೇರಿಯಿಂದ ಹೊರಡಿಸಿದ ಆದೇಶದ ಮೂಲಕ ಮುಂಗಾರು ಮಳೆಯಿಂದಾಗಿ ನೀರಿನ ಪ್ರಮಾಣ ಹೆಚ್ಚಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನದಿ ಸ್ನಾನ ನಿಷೇಧಿಸಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರು ನಿಷೇಧ ತೆರವುಗೊಳಿಸುವಂತೆ ವಿನಂತಿಸಿರುವ ಹಿನ್ನೆಲೆ, ತಹಶೀಲ್ದಾರ್ ರವರು ಮತ್ತು ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರವು ನಿಷೇಧವನ್ನು ತೆರವುಗೊಳಿಸಿದ್ದಾರೆ.

ಆದಾಗ್ಯೂ, ಅಧಿಕಾರಿಗಳು ಭಕ್ತಾಧಿಗಳು ಮುಂಜಾಗ್ರತೆ ವಹಿಸಿ ನದಿಯಲ್ಲಿ ಸ್ನಾನ ಮಾಡಬೇಕೆಂದು ಸೂಚನೆ ನೀಡಿದ್ದಾರೆ.

Post a Comment

Previous Post Next Post