ಯೇನೆಕಲ್ಲು ರೈತ ಯುವಕ ಮಂಡಲ(ರಿ.) ವತಿಯಿಂದ ದೀಪಾವಳಿ ಪ್ರಯುಕ್ತ ರೈತ ಹಬ್ಬ – ಕ್ರೀಡಾಕೂಟ.

ಕಡಬ ತಾಲೂಕು ಯೇನೆಕಲ್ಲಿನಲ್ಲಿ ರೈತ ಯುವಕ ಮಂಡಲ (ರಿ.) ಯೇನೆಕಲ್ಲು ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಭಾನುವಾರ, ಅಕ್ಟೋಬರ್ 20ರಂದು ಭವ್ಯವಾದ “ರೈತ ಹಬ್ಬ – ಕ್ರೀಡಾಕೂಟ” ಕಾರ್ಯಕ್ರಮ ನಡೆಯಲಿದೆ. ಗ್ರಾಮಸ್ಥರ ಸೌಹಾರ್ದ, ಸಹಭಾಗಿತ್ವ ಮತ್ತು ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮ ಅರ್ಪಣಾ ಕ್ರೀಡಾಂಗಣದಲ್ಲಿ ಪೂರ್ವಾಹ್ನ 10.30ಕ್ಕೆ ಉದ್ಘಾಟನಾ ಸಮಾರಂಭದೊಂದಿಗೆ ಆರಂಭಗೊಳ್ಳಲಿದೆ.

ಉದ್ಘಾಟನಾ ಸಮಾರಂಭ:
ಕಾರ್ಯಕ್ರಮವನ್ನು ಶ್ರೀ ಕಿರಣ್ ಪುಷ್ಪಗಿರಿ ಧಾರ್ಮಿಕ, ಬೆಳ್ತಂಗಡಿ ಅವರು ಉದ್ಘಾಟಿಸಲಿದ್ದಾರೆ.
ಸಭೆಗೆ ರೈತ ಯುವಕ ಮಂಡಲ (ರಿ.) ಯೇನೆಕಲ್ಲು ಅಧ್ಯಕ್ಷ ಶ್ರೀ ಜೀವಿತ್ ಪರಮಲೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ;
ಶ್ರೀ ರಾಮಕೃಷ್ಣ ಮಲ್ಲಾರ (ಅಧ್ಯಕ್ಷರು, ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್(ರಿ.) ಯೇನೆಕಲ್ಲು),
ಶ್ರೀ ಸುರೇಶ್ ಬೈಲು (ಅಧ್ಯಕ್ಷರು, ಒಕ್ಕಲಿಗ ಗೌಡ ಸೇವಾ ಸಂಘ (ರಿ.) ಕಡಬ),
ಶ್ರೀ ಅಶೋಕ್ ನೆಕ್ರಾಜೆ (ಸದಸ್ಯರು, ವ್ಯವಸ್ಥಾಪನಾ ಸಮಿತಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ),
ಶ್ರೀ ಭರತ್ ನೆಕ್ರಾಜೆ (ನಿರ್ದೇಶಕರು, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು),
ಶ್ರೀ ಲಕ್ಷ್ಮೀನಾರಾಯಣ ಕಜೆಗದ್ದೆ (ಪೂರ್ವ ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಅರೆಭಾಷೆ ಅಕಾಡೆಮಿ),
ಶ್ರೀ ರಾಮಚಂದ್ರ ಭಟ್ (ಅಧ್ಯಕ್ಷರು, ಮಹಾ ಮೃತ್ಯುಂಜೇಶ್ವರ ಶಿವಪಾರ್ವತಿ ಟ್ರಸ್ಟ್ ನಡುಗಲ್ಲು),
ಶ್ರೀ ಸಚಿನ್ ಚಿಲ್ (ಸಹಾಯಕ ವ್ಯವಸ್ಥಾಪಕರು, KMF ಮಂಗಳೂರು) ಮತ್ತು
ಇತರೆ ಗಣ್ಯರು ಹಾಜರಿರಲಿದ್ದಾರೆ.

ಗೌರವ ಉಪಸ್ಥಿತಿ:
ಗ್ರಾಮದ ಹಿರಿಯರು, ದೈವಸ್ಥಾನದ ಪ್ರಧಾನ ಪೂಜಾರಿ ಶ್ರೀ ರಾಧಾಕೃಷ್ಣ ಪೂಜಾರಿಮನೆ, ಶ್ರೀ ಉದಯ ಕುಮಾರ್ ಬಾನಡ್ಕ ಮಗಣೆ ಗೌಡರು, ಶ್ರೀ ಕೃಷ್ಣಪ್ಪ ಬಚ್ಚಿನಡ್ಕ ಮತ್ತಿತರರು ಹಾಜರಿದ್ದು ಕಾರ್ಯಕ್ರಮಕ್ಕೆ ಭಂಗಿ ಹೆಚ್ಚಿಸಲಿದ್ದಾರೆ.

ವಿಶೇಷ;
ನಿವೃತ್ತ ಸರ್ಕಾರಿ ನೌಕರರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.

ಕ್ರೀಡಾಕೂಟದ ವಿಭಾಗಗಳು:
ಯೇನೆಕಲ್ಲು ಗ್ರಾಮಸ್ಥರಿಗೆ ವಿನ್ಯಾಸಗೊಳಿಸಲಾದ ಕ್ರೀಡಾಕೂಟದಲ್ಲಿ ಪುರುಷರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಹಿರಿಯರಿಗಾಗಿ ವಿಭಿನ್ನ ಸ್ಪರ್ಧೆಗಳು ಆಯೋಜಿಸಲ್ಪಟ್ಟಿವೆ.
ಪುರುಷರ ವಿಭಾಗದಲ್ಲಿ ಹಗ್ಗಜಗ್ಗಾಟ, ವಾಲಿಬಾಲ್, ಸ್ಟೋ ಬೈಕ್ ರೇಸ್, ಗುಂಡು ಎಸೆತ, ತೆಂಗಿನಕಾಯಿ ಒಡೆಯುವುದು ಮುಂತಾದ ಸ್ಪರ್ಧೆಗಳು ನಡೆಯಲಿವೆ.
ಮಹಿಳೆಯರ ವಿಭಾಗದಲ್ಲಿ ತ್ರೋಬಾಲ್, ಸ್ಟೋ ಸ್ಕೂಟಿ ರೇಸ್, ಲಕ್ಕಿ ಗೇಮ್ ಸೇರಿದಂತೆ ಹಲವು ಮನೋರಂಜನಾ ಕ್ರೀಡೆಗಳು ಇರಲಿವೆ.
ವಿದ್ಯಾರ್ಥಿಗಳಿಗಾಗಿ ಪ್ರಾಥಮಿಕದಿಂದ ಪ್ರೌಢಶಾಲಾ ಮಟ್ಟದ ಓಟ, ಕಬಡ್ಡಿ, ಲಕ್ಕಿ ಗೇಮ್‌ಗಳು ಆಯೋಜಿಸಲಾಗಿದೆ.
ಅಂಗನವಾಡಿ ಮಕ್ಕಳಿಗೂ ವಿಶೇಷ ಆಟಗಳ ವ್ಯವಸ್ಥೆಯಿದೆ.

ಹಿರಿಯ ರೈತರ ಪರಸ್ಪರ ಸಹಕಾರ ಮತ್ತು ಜೀವನ್ಮುಖತೆಯನ್ನು ಗುರುತಿಸಿ “ರೈತ ಜೋಡಿ ವಿಶೇಷ ಪ್ರಶಸ್ತಿ” ನೀಡಿ ಗೌರವಿಸಲಾಗುವುದು.

ಸಮಾರೋಪ ಸಮಾರಂಭ:
ಸಂಜೆ 6.00ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ಶ್ರೀ ಜೀವಿತ್ ಪರಮಲೆ ವಹಿಸಲಿದ್ದು,
ಮುಖ್ಯ ಅತಿಥಿಗಳಾಗಿ ಶ್ರೀ ತುಕರಾಮ್ ಉಡುದೋಳಿ (ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರು, ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ),
ಶ್ರೀ ಜಯಪ್ರಕಾಶ್ ಆರ್ (ಅಧ್ಯಕ್ಷರು, ರೋಟರಿ ಕ್ಲಬ್ ಸುಬ್ರಹ್ಮಣ್ಯ),
ಶ್ರೀ ಹರೀಶ್ ಬಾನಡ್ಕ (ಅಧ್ಯಕ್ಷರು, ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ),
ಶ್ರೀ ಹೊನ್ನಪ್ಪ ಗೌಡ ಕಟ್ಟ (ನಿವೃತ್ತ ಸುಬೇದಾರ, ಭಾರತೀಯ ಭೂಸೇನೆ),
ಶ್ರೀ ಪುನೀತ್ ಕರ್ನಾಜೆ, ಶ್ರೀ ವಿಜಯ್ ಕುಮಾರ್ ಅಮೈ, ಶ್ರೀ ಪುಟ್ಟಣ್ಣ ಗೌಡ ಬೂದಿಪಳ್ಳ, ಶ್ರೀ ಹವೀನ್ ಬಾಲಾಡಿ ಮತ್ತಿತರರು ಭಾಗವಹಿಸಲಿದ್ದಾರೆ.

ಆಯೋಜಕರು:
ರೈತ ಯುವಕ ಮಂಡಲ (ರಿ.) ಯೇನೆಕಲ್ಲು ಪರವಾಗಿ ಅಧ್ಯಕ್ಷರು ಶ್ರೀ ಜೀವಿತ್ ಪರಮಲೆ, ಗೌರವಾಧ್ಯಕ್ಷರು ಮನುದೇವ್ ಪರಮಲೆ, ಉಪಾಧ್ಯಕ್ಷರು ಕೌಶಿಕ್ ಕಲ್ಕುದಿ, ಕಾರ್ಯದರ್ಶಿ ಅಶೋಕ್ ಕುಮಾರ್ ಅಂಬೆಕಲ್ಲು, ಮತ್ತು ಇತರೆ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಕ್ರಿಯವಾಗಿ ತೊಡಗಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮಸ್ಥರು, ಕ್ರೀಡಾ ಆಸಕ್ತರು ಹಾಗೂ ಕುಟುಂಬ ಸಮೇತವಾಗಿ ಭಾಗವಹಿಸಿ ದೀಪಾವಳಿ ಹಬ್ಬದ ಹರ್ಷವನ್ನು ಹಂಚಿಕೊಳ್ಳುವಂತೆ ರೈತ ಯುವಕ ಮಂಡಲದ ವತಿಯಿಂದ ಆಹ್ವಾನಿಸಲಾಗಿದೆ.

Post a Comment

Previous Post Next Post