ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ಎಲುಬಿನ ಖನಿಜ ಸಾಂದ್ರತೆ ಮತ್ತು ವಿಶ್ವ ಮಾನಸಿಕ ಅರೋಗ್ಯ ದಿನ ಆಚರಣೆ.

ನೆಲ್ಯಾಡಿ;ಅಕ್ಟೋಬರ್ 10ರಂದು ಅಶ್ವಿನಿ ಆಸ್ಪತ್ರೆ ಹೊಸಮಜಲು ನೆಲ್ಯಾಡಿ ವತಿಯಿಂದ ಉಚಿತ ಎಲುಬಿನ ಖನಿಜ ಸಾಂದ್ರತೆ ಪರೀಕ್ಷಾ ಶಿಬಿರ ಮತ್ತು ವಿಶ್ವ ಮಾನಸಿಕ ಆರೋಗ್ಯ  ದಿನವನ್ನು ಆಚರಿಸಲಾಯಿತು.

 ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯದ ಅಧ್ಯಕ್ಷರಾದ ಶ್ರೀ ಜಯಾನಂದ ಬಂಟ್ರಿಯಾಲ್  ರವರು ಶಿಬಿರವನ್ನು ಉದ್ಘಾಟಿಸಿ ಅಶ್ವಿನಿ ಆಸ್ಪತ್ರೆ ವತಿಯಿಂದ ನಡೆಯುವಂತಹ ಶಿಬಿರಕ್ಕೆ ಶುಭ ಹಾರೈಸಿದರು.

ಶಿಬಿರದ ವೈದ್ಯಾಧಿಕಾರಿ ಯಾದ ಡಾ|ಶಮಂತ್ ವೈಕೆ ಅವರ ಮಾರ್ಗದರ್ಶನದಲ್ಲಿ ಅಲೆಂಬಿಕ್ ಫಾರ್ಮಾ ಕಂಪನಿಯ ವತಿಯಿಂದ ಶ್ರೀ ಪೃಥ್ವಿರಾಜ್ ಮತ್ತು ಶ್ರೀ ಅಬ್ರಾರ್ ಅವರು ಶಿಬಿರಕ್ಕೆ ಆಗಮಿಸಿದ ನಾಗರಿಕರಿಗೆ ಖನಿಜ ಸಾಂದ್ರತೆ ಪರೀಕ್ಷೆಯನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಡಾ. ಸುಧಾ ವೈ .ಕೆ ಯವರು ಮಾಹಿತಿಯನ್ನು ನೀಡಿದರು. ಡಾಕ್ಟರ್ ಶಮಂತ್ ವೈ.ಕೆಯವರು ಶಿಬಿರದಲ್ಲಿ ನಡೆಯುವ ಪರೀಕ್ಷೆ ಮತ್ತು ಯಾವ ರೀತಿಯಾಗಿ ನಮ್ಮ ದೇಹದಲ್ಲಿರುವ ಎಲುಬು ಮತ್ತು  ಕೀಲುವಿನ ಜಾಗೃತಿ ವಹಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಡಾಕ್ಟರ್ ಮುರಳೀಧರ ವೈ ಕೆ ಯವರು ಮಾತಾಡಿ ಶಿಬಿರಕ್ಕೆ ಸ್ಪಂದಿಸಿದ ಎಲ್ಲಾ ನಾಗರಿಕರಿಗೆ ಧನ್ಯವಾದವನ್ನು ಅರ್ಪಿಸಿದರು ಮತ್ತು ಇನ್ನು ಮುಂದಕ್ಕೂ ಇಂತಹ ಅನೇಕ ಆರೋಗ್ಯಕ್ಕೆ ಸಂಬಂಧಪಟ್ಟ ಶಿಬಿರಗಳನ್ನು ನಾಗರಿಕರಿಗೆ ಉಪಯುಕ್ತವಾಗುವಂತೆ ನಡೆಸುವುದಾಗಿ ಭರವಸೆಯನ್ನು ನೀಡಿದರು. ಆಸ್ಪತ್ರೆಯ ಮ್ಯಾನೇಜರ್ ಜಾನ್ಸನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು, ಸಿಬ್ಬಂದಿ ಯೋಗಿನಿ ಅವರು ಸ್ವಾಗತಿಸಿದರು .ಕುಮಾರಿ ಶ್ರದ್ಧಾರವರು ಧನ್ಯವಾದಗೈದರು. ಶಿಬಿರದಲ್ಲಿ ನೂರಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

Post a Comment

Previous Post Next Post