ಮಂಗಳೂರು : ಭರತನಾಟ್ಯ ಕ್ಷೇತ್ರದಲ್ಲಿ ಹೊಸ ಪ್ರತಿಭೆಯೊಂದು ತನ್ನ ಕಲೆಯ ಮೂಲಕ ವೇದಿಕೆಯನ್ನು ಅಲಂಕರಿಸಲು ಸಜ್ಜಾಗಿದೆ. ಗಾನ ನೃತ್ಯ ಅಕಾಡೆಮಿ (ರಿ), ಮಂಗಳೂರು ಸಂಸ್ಥೆಯ ವತಿಯಿಂದ ಆಯೋಜಿಸಲಾದ ಅನಂತಕೃಷ್ಣ ಸಿ.ವಿ. ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಅಕ್ಟೋಬರ್ 25, 2025, ಶನಿವಾರ ಸಂಜೆ 5:15ಕ್ಕೆ ಮಂಗಳೂರು ಟೌನ್ ಹಾಲ್‌ನಲ್ಲಿ ಜರುಗಲಿದೆ. ಈ ಸಂಭ್ರಮದಲ್ಲಿ ಭರತನಾಟ್ಯದ ಸುಂದರ ಶೈಲಿ, ಭಾವನಾತ್ಮಕ ಅಭಿವ್ಯಕ್ತಿ ಹಾಗೂ ಸಾಂಸ್ಕೃತಿಕ ಪರಂಪರೆಯ ವೈಭವ ಒಂದೇ ವೇದಿಕೆಯಲ್ಲಿ ಮೂಡಿಬರುವ ನಿರೀಕ್ಷೆಯಿದೆ.
🎭 ಕಾರ್ಯಕ್ರಮದ ವಿವರಗಳು
ನೃತ್ಯ ಶಿಷ್ಯ: ಅನಂತಕೃಷ್ಣ ಸಿ.ವಿ.
ಗುರು: ವಿದುಷಿ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ
ಆಯೋಜಕರು: ಗಾನ ನೃತ್ಯ ಅಕಾಡೆಮಿ (ರಿ), ಮಂಗಳೂರು
ಸ್ಥಳ: ಟೌನ್ ಹಾಲ್, ಮಂಗಳೂರು
ದಿನಾಂಕ ಮತ್ತು ಸಮಯ: ಅಕ್ಟೋಬರ್ 25, 2025, ಸಂಜೆ 5:15
🌸 ದೀಪಪ್ರಜ್ವಲನ
ಕರ್ನಾಟಕ ಕಲಾತಿಲಕ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್, ಶಾಂತಲಾ ಪ್ರಶಸ್ತಿ ಪುರಸ್ಕೃತ ಹಿರಿಯ ಗುರು ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
👏 ಗೌರವಾನ್ವಿತ ಅತಿಥಿಗಳು
ಡಾ. ಕಿಶೋರ್ ಕುಮಾರ್ ಉಬ್ರಂಗಳ, ಎಂ. ಡಿ, ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೃದ್ಧಾಪ್ಯದ ವೈದ್ಯಕೀಯ ಪ್ರಾಧ್ಯಾಪಕರು.
ಶ್ರೀಮತಿ ಜಾಯ್ ಜೀವನ್ ರೈ, ಪ್ರಾಂಶುಪಾಲರು, ಎಸ್‌ಡಿಎಂ ಶಾಲೆ, ಬೋಳೂರು, ಮಂಗಳೂರು
ಡಾ. ಸಾಗರ್ ಟಿ.ಎಸ್., ನಿರ್ದೇಶಕರು, ಶ್ರೀ ಸಾಯಿರಾಮನ್ ನೃತ್ಯ ಕೇಂದ್ರ, ತುಮಕೂರು
🎶 ಮೇಳ ಸಹಕಾರಿಗಳು
ನಟುವಾಂಗಂ : ಗುರು ವಿದುಷಿ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ
ಗಾಯನ: ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್, ಚೆನ್ನೈ
ಮೃದಂಗ: ವಿದ್ವಾನ್. ವಿನಯ್ ನಾಗರಾಜನ್, ಬೆಂಗಳೂರು
ವೀಣೆ: ವಿದ್ವಾನ್. ಅನಂತನಾರಾಯಣ, ಚೆನ್ನೈ
ಕೊಳಲು: ವಿದ್ವಾನ್. ರಘುನಂದನ್, ಬೆಂಗಳೂರು
🌹 ಮೂಲತಃ ಸುಳ್ಯ ದವರಾದ ಗುರು ವಿದುಷಿ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ — ಕಲಾ ಪ್ರೇರಣೆಯ ಶಕ್ತಿ
ಭರತನಾಟ್ಯದಲ್ಲಿ ಪ್ರತಿಭೆಗಳನ್ನು ಪೋಷಿಸುವ ಉದ್ದೇಶದಿಂದ 1994ರಲ್ಲಿ ಗಾನ ನೃತ್ಯ ಅಕಾಡೆಮಿ (ಜಿಎನ್‌ಎ) ಸ್ಥಾಪಿಸಿ, ವಿದ್ಯಾಶ್ರೀ ರಾಧಾಕೃಷ್ಣ ಅವರು ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಕಲಾಕ್ಷೇತ್ರದ ಶೈಲಿ ಮತ್ತು ಪರಂಪರೆಯನ್ನು ಅಳವಡಿಸಿಕೊಂಡು ನೃತ್ಯಧಾರ, ಪ್ರೇರಣ, ಆರೋಹಣ ಮುಂತಾದ ವೇದಿಕೆಗಳ ಮೂಲಕ ನೂರಾರು ಶಿಷ್ಯರನ್ನು ಕಲಾ ಲೋಕಕ್ಕೆ ಪರಿಚಯಿಸಿದ್ದಾರೆ.
ಅವರು ಭಾರತ, ಶ್ರೀಲಂಕಾ, ಕುವೈತ್, ಯುಕೆ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಪ್ರದರ್ಶನ ನೀಡಿ, ಕಲಾವಿದರ ಹೃದಯಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಕರ್ನಾಟಕ ಕಲಾಜ್ಯೋತಿ, ಯುವ ಸಾಧಕ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.
🌼 ರಂಗಪ್ರವೇಶ ಶಿಷ್ಯ — ಅನಂತಕೃಷ್ಣ ಸಿ.ವಿ.
ಜನವರಿ 8, 2003ರಂದು
ವಿದುಷಿ ಶ್ರೀಮತಿ ವಿದ್ಯಾ ಮತ್ತು ಶ್ರೀ ಚಂದ್ರಶೇಖರ ದಂಪತಿಗಳಿಗೆ ಜನಿಸಿದ ಅನಂತಕೃಷ್ಣ ಅವರು ಮೂಡುಬಿದಿರೆಯ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಪದವಿ ಅಧ್ಯಯನ ನಡೆಸುತ್ತಿದ್ದಾರೆ. ಕರ್ನಾಟಕ ಶಾಸ್ತ್ರಿಯ ಸಂಗೀತ ವನ್ನು , ಶ್ರೀಮತಿ ಜಯಭಾರತಿ ಪ್ರಕಾಶ್, ಕಾಸರಗೋಡು ಇವರ ಬಳಿ ಕಲಿಯುತ್ತಿದ್ದಾರೆ.
10ನೇ ವಯಸ್ಸಿನಲ್ಲಿ ಭರತನಾಟ್ಯ ತರಬೇತಿಯನ್ನು ಪ್ರಾರಂಭಿಸಿದ ಅವರು ಗುರು ವಿದುಷಿ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ ಅವರ ಮಾರ್ಗದರ್ಶನದಲ್ಲಿ ಕಲಾ ಪ್ರಕಾರದ ಆಳವನ್ನು ಅರಿಯುತ್ತಿದ್ದಾರೆ.
ಅವರು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ 2016-17ರಲ್ಲಿ CCRT ವಿದ್ಯಾರ್ಥಿವೇತನ ಪಡೆದಿದ್ದು, ರಾಷ್ಟ್ರ ಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ಪುರಸ್ಕೃತರಾಗಿದ್ದಾರೆ. ಭಾರತ ಮತ್ತು ವಿದೇಶ ಸೇರಿದಂತೆ ನೂರಕ್ಕೂ ಹೆಚ್ಚು ವೇದಿಕೆಗಳಲ್ಲಿ ಅವರ ನೃತ್ಯ ಪ್ರದರ್ಶನಗಳು ಪ್ರಶಂಸೆಗೆ ಪಾತ್ರವಾಗಿವೆ.
🎨 ತಾಂತ್ರಿಕ ಸಹಕಾರ ಮತ್ತು ವಿನ್ಯಾಸ
ಸಂಕಲನೆ: ವಿದುಷಿ ಶ್ರೀಮತಿ ಸೌಮಂಗಲಾ ರತ್ನಾಕರ್, ಮಂಗಳೂರು
ವೇಷಭೂಷಣ: ಶ್ರೀ ಸುನಿಲ್ ಉಚ್ಚಿಲ
ವಿಡಿಯೋ: ಐರಿಸ್ ಪಿಕ್ಸೆಲ್ಸ್, ಪ್ರಸನ್ನ
ಲೈಟಿಂಗ್ಸ್: ದೇವ್ ಪ್ರೊ ಸೌಂಡ್ಸ್, ಮಂಗಳೂರು
ಫೋಟೋಗ್ರಫಿ: ವಿಷ್ಣುಮೂರ್ತಿ ಮಂಜಿತ್ತಾಯ, ಮಂಗಳೂರು.
ಕರಪತ್ರ ಫೋಟೋಗಳು: ಪುನಿಕ್ ಶೆಟ್ಟಿ, ಮಂಗಳೂರು
ವಿನ್ಯಾಸ: ಭರತ್ ರಾಜ್ ಬೈಕಾಡಿ, ಮಂಗಳೂರು
💐 ಆಹ್ವಾನ
ಭರತನಾಟ್ಯದ ಸುಂದರ ಪರಂಪರೆ ಮತ್ತು ಯುವ ಪ್ರತಿಭೆಯ ನವಚೇತನದ ನೋಟ ನೀಡಲಿರುವ ಈ ರಂಗಪ್ರವೇಶಕ್ಕೆ ಕಲಾಭಿಮಾನಿಗಳು, ಗುರುಗಳು ಹಾಗೂ ವಿದ್ಯಾರ್ಥಿಗಳು ಹೃತ್ಪೂರ್ವಕವಾಗಿ ಆಹ್ವಾನಿತರಾಗಿದ್ದಾರೆ.
ನಿಮ್ಮ oct 8 ರ ರಂಗಪ್ರವೇಶ ವರದಿಯಲ್ಲಿ ಅನಂತ ಕೃಷ್ಣನಿಗೆ ಹಿಂದಿನ 12 ವರ್ಷ ಕಾಲ ನಿಶುಲ್ಕ ವಾಗಿ ವಿಧ್ವತ್ತ್ ವರೆಗೆ ನೃತ್ಯ ಕಲಿಸಿದ ಮಂಗಳೂರಿನ ಹಿರಿಯ ನೃತ್ಯ ಗುರು ವಿಧುಷಿ ಕರ್ನಾಟಕ ಕಲಾಶ್ರೀ ಗೀತಾ ಸರಳಾಯರನ್ನು ಹೆಸರಿಸಿಲ್ಲ. ಯಾಕೆಂದು ತಿಳಿಯಲಿಲ್ಲ. ನಿಮ್ಮ ನ್ಯೂಸ್ನ source ಯಾವುದು ತಿಳಿಸಬಹುದೇ?
ReplyDeletePost a Comment