ಮಂಗಳೂರು ನಗರದಲ್ಲಿ ಇ-ಸಿಗರೇಟ್ ಅಕ್ರಮ ಮಾರಾಟ ಬಯಲಾಗಿತು — ರೂ. 9.72 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ.

ಮಂಗಳೂರು ಅ. 8:ಮಂಗಳೂರು ನಗರದಲ್ಲಿ ನಿಷೇಧಿತ ಇ-ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳ ಅಕ್ರಮ ಮಾರಾಟ ಮತ್ತು ಸರಬರಾಜು ನಡೆಯುತ್ತಿದ್ದ ಘಟನೆ ಬಯಲಾಗಿದೆ. ಲಾಲ್ ಬಾಗ್‌ನ ಸಾಯಿಬೀನ್ ಕಾಂಪ್ಲೆಕ್ಸ್‌ನಲ್ಲಿರುವ “ಆಮಂತ್ರಣ” ಅಂಗಡಿಯಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ, ಅಂದಾಜು ರೂ. 9,72,745/- ಮೌಲ್ಯದ ಇ-ಸಿಗರೇಟ್ ಹಾಗೂ ಇತರೆ ಪರಿಕರಣ ವಶಕ್ಕೆ ಪಡೆದಿದ್ದಾರೆ.

ಬರ್ಕೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀ ಮೋಹನ್ ಕೊಟ್ಟಾರಿ ಅವರ ನೇತೃತ್ವದಲ್ಲಿ ಪಿ.ಎಸ್.ಐ ಹಾಗೂ ಸಿಬ್ಬಂದಿಗಳು 06-10-2025 ರಂದು ಸಂಜೆ ದಾಳಿ ನಡೆಸಿದ್ದು, ಅಕ್ರಮವಾಗಿ ಇ-ಸಿಗರೇಟ್ ಹಾಗೂ ಹುಕ್ಕಾ ಉಪಕರಣಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ದಾಳಿಯ ವೇಳೆ ಅಂಗಡಿಯಿಂದ ಒಟ್ಟು 847 ವಿವಿಧ ಕಂಪನಿಗಳ ಇ-ಸಿಗರೇಟ್‌ಗಳು (ಮೌಲ್ಯ ರೂ. 4,43,125/-), ಸಿಗರೇಟ್ ಪ್ಯಾಕ್‌ಗಳ ಮೇಲೆ ಆರೋಗ್ಯ ಎಚ್ಚರಿಕೆಯ ಚಿತ್ರವಿಲ್ಲದೆ ಮಾರಾಟಕ್ಕಿಟ್ಟಿದ್ದ ಸ್ವದೇಶಿ ಮತ್ತು ವಿದೇಶಿ ಬ್ರಾಂಡ್‌ಗಳ 10 ಪ್ಯಾಕ್ (412 ಬಾಕ್ಸ್) ಹಾಗೂ 86 ಪ್ಯಾಕ್ ಸಿಗರೇಟ್‌ಗಳು (ಮೌಲ್ಯ ರೂ. 5,09,120/-) ಹಾಗೂ ಹುಕ್ಕಾ ಸೇವನೆಗೆ ಬಳಸುವ 25 ಸಾಧನಗಳು (ಮೌಲ್ಯ ರೂ. 20,500/-) ವಶಪಡಿಸಿಕೊಳ್ಳಲಾಯಿತು.

ಈ ಪ್ರಕರಣದಲ್ಲಿ ಆರೋಪಿಗಳಾದ
1️⃣ ಸಂತೋಷ್ (32), ವಾಸ: ಗಣೇಶ್ ಕೋಡಿ ಹೌಸ್, ಬಂಟ್ವಾಳ ತಾಲೂಕು,
2️⃣ ಇಬ್ರಾಹಿಂ ಇರ್ಷಾದ್ (33), ವಾಸ: ಜಾಮೀಯಾ ಮಸೀದಿ ಬಳಿ, ಕುದ್ರೋಳಿ, ಮಂಗಳೂರು, ಮತ್ತು
3️⃣ ಶಾಪ್ ಮಾಲಕ ಶಿವು ದೇಶಕೋಡಿ ಇವರ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಮೊ.ನಂ: 104/2025 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣವನ್ನು Prohibition of Electronic Cigarettes Act 2019 ನ ಕಲಂ 7 ಮತ್ತು 8 ಹಾಗೂ COTPA (Cigarettes and Other Tobacco Products Act, Amendment Bill 2015) ನ ಕಲಂ 20(2) ಅಡಿಯಲ್ಲಿ ದಾಖಲಿಸಲಾಗಿದೆ.

ಮಂಗಳೂರು ನಗರದ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಾ — ಇ-ಸಿಗರೇಟ್ ಅಥವಾ ನಿಷೇಧಿತ ತಂಬಾಕು ಉತ್ಪನ್ನಗಳ ಮಾರಾಟ ಅಥವಾ ಖರೀದಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

📸 ಮಂಗಳೂರು ನಗರ ಪೊಲೀಸ್ ಇಲಾಖೆ — ಪತ್ರಿಕಾ ಪ್ರಕಟಣೆ ಆಧಾರಿತ ವರದಿ

Post a Comment

Previous Post Next Post