ವಿಟ್ಲದಿಂದ ಕಾಣೆಯಾಗಿರುವ ವ್ಯಕ್ತಿಯೊಬ್ಬರು ಸುಬ್ರಹ್ಮಣ್ಯ ಪರಿಸರದಲ್ಲಿ ಓಡಾಟ ನಡೆಸಿದ್ದು ಮನೆಯವರೂ ಹುಡುಕಾಟ ನಡೆಸಿದರೂ ಸಿಗದಿರುವ ಬಗ್ಗೆ ಸುದ್ದಿಯಾಗಿದೆ.

ಬಂಟ್ವಾಳ ತಾಲೂಕಿನ ವಿಟ್ಲದ ಪಳಿಕೆ ಅಣ್ಣಮೂಲೆ ನಿವಾಸಿ ಸುಂದರ ನಾಯ್ಕ್(55 ವ) ಕಾಣೆಯಾಗಿರುವ ವ್ಯಕ್ತಿ.

ಅ.1ರಂದು ದಸರಾ ಹಬ್ಬದಲ್ಲಿ ಹುಲಿ ವೇಷ ಹಾಕಲು ಇದೆ ಎಂದು ಮನೆಯಲ್ಲಿ ಹೇಳಿ ಹೋಗಿದ್ದರು.‌ ಬಳಿಕ‌ ಕಾಣೆಯಾಗಿದ್ದರು. ಈ ಬಗ್ಗೆ ವಿಟ್ಲ ಪೋಲೀಸ್ ಠಾಣೆಗೆ ದೂರನ್ನು ನೀಡಲಾಗಿತ್ತು. ಕೆಲ ದಿನದ ಹಿಂದೆ ಸುಬ್ರಹ್ಮಣ್ಯ ದಲ್ಲಿ ಮನೆಯವರು ಹುಡುಕಾಡಿದಾಗ ಗುಂಡ್ಯದಲ್ಲಿ ಹಾಗೂ ಸುಬ್ರಹ್ಮಣ್ಯ ಬಸ್ಸು ತಂಗುದಾಣದಲ್ಲಿ ಇರುವುದನ್ನು ಮತ್ತು ರಿಕ್ಷಾ ಚಾಲಕರು ನೋಡಿರುವುದನ್ನು ಖಚಿತಪಡಿಸಿದರೆನ್ನಲಾಗಿದೆ. ಆದರೆ ಮತ್ತೆ ಹುಡುಕಾಡಿದರೂ ಪತ್ತೆಯಾಗಿಲ್ಲ.


ಹೀಗಾಗಿ ಈ ಚಿತ್ರದಲ್ಲಿರುವ ವ್ಯಕ್ತಿ ಸುಬ್ರಹ್ಮಣ್ಯದ ಆಸುಪಾಸಿನಲ್ಲಿ ನೋಡಿದರೆ ಮಾಹಿತಿ ( ಫೋನ್ : +91 97313 27814) ನೀಡುವಂತೆ ಮನೆಯವರು ವಿನಂತಿಸಿದ್ದಾರೆ.

Post a Comment

Previous Post Next Post