ಕುಕ್ಕೆ ಸುಬ್ರಹ್ಮಣ್ಯ; ಜ.15,ಮಾರುತಿ ವೆಘನರ್ ಹಾಗೂ ಸುಝುಕಿ ಅಕ್ಸಸ್ ಮೊಟರ್ ಸೈಕಲ್.ಮದ್ಯೆ ಕುಲ್ಕುಂದ ಎಂಬಲ್ಲಿ ರಸ್ತೆ ಅಪಘಾತ ಸಂಭವಿಸಿದೆ.
ಸುಝುಕಿ ಅಕ್ಸಸ್ ಮೊಟರ್ ಸೈಕಲ್ ಸವಾರ ಎಸ್, ಎಸ್, ಪಿ,ಯು ಕಾಲೇಜು ಕುಕ್ಕೆ
ಸುಬ್ರಮಣ್ಯ ಎಂಬಲ್ಲಿ ಗಣಕಶಾಸ್ತ್ರ ಉಪನ್ಯಾಸಕರಾದ ಸುಮಾರು 45 ವರ್ಷ ಪ್ರಾಯದ ಶ್ರೀಧರ್ ಪುತ್ರನ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ.
ಅವರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ಆಂಬುಲೆನ್ಸ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.
ಮೊಟರ್ ಸೈಕಲ್ ಸಹಸವರ ಭವ್ಯ ಕುಲ್ಕುಂದ ಎಂಬವರಿಗೆ ತರಚು ಗಾಯಗಳಾಗಿದ್ದು ಅವರನ್ನು ಸುಬ್ರಮಣ್ಯ ಸದಾನಂದ ಆಸ್ಪತ್ರೆಗೆ ಸೇರಿಸಲಾಗಿದೆ.
ಕಾರಿನ ಪ್ರಯಾಣಿಕರು ಭದ್ರಾವತಿ ಮೂಲದವರಾಗಿದ್ದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಯಾತ್ರೆಗೆ ಬರುತ್ತಿರುವ ಸಂದರ್ಭದಲ್ಲಿ ಕುಲ್ಕುಂದ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.
Post a Comment