ಮನೆಯಲ್ಲಿ ಸಾಕಲು ಕಷ್ಟವಾಗುವ ದೇಸಿ ತಳಿಯ ಹೋರಿಗಳನ್ನು ಸಾಕಲು ರವಿಕೃಷ್ಣಪ್ರಸಾದ್ ಎಂಬವರು ಪುತ್ತೂರು ತಾಲೂಕು ,ಬಡಗನ್ನೂರು, ಮೈಂದನಡ್ಕ,ಎಂಬಲ್ಲಿ 12 ಎಕ್ರೆ ತಮ್ಮ ಸ್ವಂತ ಭೂಮಿಯಲ್ಲಿ ಹೋರಿಶಾಲೆ ತೆರೆದಿದ್ದಾರೆ.
ಬೀಡಾಡಿ ಹೋರಿಗಳನ್ನು ಹಾಗೂ ಕೃಷಿಕರು ತಮ್ಮ ಮನೆಯಲ್ಲಿ ಸಾಕಲು ಕಷ್ಟವಾಗುವಂತ ದೇಶಿ ತಳಿಯ ಹೋರಿಗಳನ್ನು ಬಡಗನ್ನೂರು ಹೋರಿ ಶಾಲೆಗೆ ತಂದುಬಿಟ್ಟರೆ. ಹೋರಿಗಳನ್ನು ಸಾಕುವ ವ್ಯವಸ್ಥೆಯನ್ನು ಕೃಷ್ಣಪ್ರಸಾದ್ ಅವರು ಮಾಡಿದ್ದಾರೆ.
ತಮ್ಮ 12 ಎಕರೆ ಭೂಮಿಯಲ್ಲಿ ಈ ಹೋರಿಗಳನ್ನು ಸ್ವಾತಂತ್ರ್ಯವಾಗಿ ಬಿಡಲಾಗುತ್ತದೆ.
ಹೋರಿಗಳಿಗೆ ಬೇಕಾದಷ್ಟು ಹುಲ್ಲು, ನೀರು ಎಲ್ಲ ಈ ಕೃಷಿ ಭೂಮಿಯಲ್ಲಿ ಲಭ್ಯವಿದೆ.
ಹೋರಿ ಶಾಲೆಗೆ ಹೋರಿಗಳನ್ನು ತಂದು ಬಿಡಲು ಅದರ ದಾಖಲೆ ಪತ್ರಗಳು ಹಾಗೂ ಪಶು ವೈದ್ಯರು ನೀಡುವ ದಾಖಲೆ ಪತ್ರಗಳನ್ನು ನೀಡಬೇಕು.
ಮಾಧ್ಯಮದ ಮೂಲಕ ರವಿಕೃಷ್ಣಪ್ರಸಾದ್ ಅವರನ್ನು ಮಾತನಾಡಿಸಿದಾಗ ನಾನು ನನ್ನ ಸ್ವಂತ 12 ಎಕ್ರೆ ಜಾಗದಲ್ಲಿ ಹೋರಿಗಳನ್ನು ಮಾತ್ರ ಪಡೆದು ಅದರ ರಕ್ಷಣೆ ಮಾಡುವ ಒಂದು ಕೆಲಸಕ್ಕೆ ಕೈ ಹಾಕಿದ್ದೇನೆ.
ಗೋವುಗಳು ಕಟುಕರ ಪಾಲಾಗುವುದನ್ನ ತಡೆಯುವ ದೃಷ್ಟಿಯಿಂದ ಈ ಒಂದು ಕಾರ್ಯವನ್ನ ಮಾಡುತ್ತಿದ್ದೇನೆ, ದೆಸಿತಳಿಯ ಹೋರಿಗಳ ರಕ್ಷಣೆ ಆಗಬೇಕು ನನ್ನ ಬಳಿ 12 ಎಕ್ರೆ ಭೂಮಿ ಇದೆ ಎಷ್ಟು ಸಂಖ್ಯೆಯಲ್ಲಿಯೂ ಹೋರಿಗಳಿದ್ದರೆ ಅದನ್ನು ಕಟ್ಟಿ ಹಾಕದೆ ಸ್ವಾತಂತ್ರ್ಯವಾಗಿ ಬಿಟ್ಟು ರಕ್ಷಣೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಹೋರಿಗಳನ್ನು ಬಡಗನ್ನೂರು ಹೋರಿಶಾಲೆಗೆ ತಂದು ಬಿಡುವ ಜವಾಬ್ದಾರಿ ನಿಮ್ಮದೇ ಎಂದಿದ್ದಾರೆ.
ರವೀಕೃಷ್ಣಪ್ರಸಾದ್ ಅವರ ಮೊಬೈಲ್ ಸಂಖ್ಯೆ.
+917483911651.
+9187624 85047.
ಹೋರಿಗೋಶಾಲೆ ಲೊಕೇಶನ್.
https://maps.app.goo.gl/nEL3xEFXYntAFZqd9
Post a Comment