ಕುಕ್ಕೆ ಸುಬ್ರಮಣ್ಯ; ನ,30, ಮಾನ್ಯ ಆಡಳಿತ ಅಧಿಕಾರಿ ಜುಬಿನ್ ಮಹಾಪಾತ್ರ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತ್ತ ಗುಂಡಿ ಅವರು ಕುಣಿತ ಭಜನೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದ್ದರು.
ಉದ್ಘಾಟನೆ ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಗೋಪುರದಿಂದ ರಥ ಬೀದಿ ಯುದ್ಧಕ್ಕೂ ಭಜನಾ ತಂಡಗಳು ಕುಣಿತ ಭಜನೆ ಕಾರ್ಯಕ್ರಮವನ್ನು ನಡೆಯಿತು.
ಮಹಿಳೆಯರು, ಮಕ್ಕಳು, ಪುರುಷರು ಸೇರಿದಂತೆ ಸಾವಿರಾರು ಭಗವದ್ಭಕ್ತರು ಕುಕ್ಕೆ ಸುಬ್ರಮಣ್ಯ ಚಂಪಾ ಷಷ್ಠಿ ಮಹೋತ್ಸವದ ಈ ಒಂದು ವಿಶೇಷ ಕುಣಿತ ಭಜನೆ ಕಾರ್ಯಕ್ರಮದಲ್ಲಿ ಸುಮಧುರ ಭಜನೆಗೆ ತಾಳ ಹಿಡಿದು ಹೆಜ್ಜೆ ಹಾಕಿದರು.
ಶ್ರೀ ಸುಬ್ರಹ್ಮಣ್ಯ ಶ್ರೀ ದೇವರ ಉತ್ಸವ ನಡೆಯಿತು, ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲ ಭಗವದ್ಭಕ್ತರು ಶ್ರೀ ದೇವರಿಗೆ ದೀಪ ಹಚ್ಚುವುದರೊಂದಿಗೆ ಶ್ರೀ ದೇವರಿಗೆ ದೀಪೋತ್ಸವ ನಡೆಸಿದರು.
ಈ ಸಂದರ್ಭ ಊರ ಹಾಗೂ ಪರವೂರ ಸಾವಿರಾರು ಮಂದಿ ಭಗವದ್ಭಕ್ತರು
ಆಗಮಿಸಿ ಶ್ರೀ ದೇವರ ದರ್ಶನ ಪಡೆದು ದೇವರ ಪ್ರಸಾದ ಸ್ವೀಕರಿಸಿದರು.
إرسال تعليق