ನೆಲ್ಯಾಡಿ.ಕಡಬ ತಾಲೂಕು ಕೌಕ್ರಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಲ್ಯಾಡಿ ಪೇಟೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ವತಿಯಿಂದ ಸದಸ್ಯರ ಪ್ರವಾಸಿ ವಾಹನಗಳಿಗೆ ನಿಗದಿತವಾದ ನಿಲುಗಡೆ ಸ್ಥಳವನ್ನು ಸ್ಥಳೀಯ ಟ್ಯಾಕ್ಸಿ ಚಾಲಕರ ಸಮ್ಮುಖದಲ್ಲಿ ಟ್ಯಾಕ್ಸಿ ಸ್ಟಾಂಡಿನ ನಾಮ ಫಲಕಕ್ಕೆ ಹೂವಿನ ಹಾರ ಹಾಕುವುದರ ಮೂಲಕ ಉದ್ಘಾಟೀಸಲಾಯಿತು.
ಕೌಕ್ರಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಲೋಕೇಶ್ ಬಾಣಜಾಲು ಅವರು ಉದ್ಘಾಟನೆ ನಡೆಸಿಕೊಟ್ಟರು . ಪವಿತ್ರ ಕ್ಷೇತ್ರ ಗಳಾದ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಇದರ ಮಧ್ಯ ಭಾಗದಲ್ಲಿರುವಂತಹ ಅಭಿವೃದ್ಧಿ ಹೊಂದುತ್ತಿರುವ ನೆಲ್ಯಾಡಿ ಪೇಟೆಯಲ್ಲಿ ಒಂದು ಟ್ಯಾಕ್ಸಿ ಸ್ಟ್ಯಾಂಡ್ ಅಗತ್ಯವಿದೆ ಎಂಬ ಸದಸ್ಯ ಚಾಲಕ ಮಿತ್ರರ ಕೋರಿಕೆಯಂತೆ ಕೌಕ್ರಾಡಿಗ್ರಾಮ ಪಂಚಾಯತಿನ ಅಧ್ಯಕ್ಷರು ಟ್ಯಾಕ್ಸಿ ಸ್ಟಾಂಡ್ ಗೆ ಅನುಮತಿಯನ್ನು ನೀಡಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ಸ್ ಮ್ಯಾಕ್ಸಿಕ್ಯಾಬ್ ಸಂಘದ ಅಧ್ಯಕ್ಷರಾದ ಆನಂದ ಕೆ ಮತ್ತು ಸಂಘಟನಾ ಕಾರ್ಯದರ್ಶಿಯಾದ ಉದಯಕುಮಾರ್ ಎಣ್ಣೆತೋಡಿಯವರು ಈ ಸಂದರ್ಭದಲ್ಲಿ ಮಾತನಾಡಿ ಟ್ಯಾಕ್ಸಿಸ್ಟಾಂಡ್ ನ ಅಗತ್ಯತೆ ಮತ್ತು ಸದಸ್ಯರಿಗೆ ಸಂಘಟನೆ ಬಗ್ಗೆ ವಿವರಿಸಿದರು . ಸಂಘದ ನೆಲ್ಯಾಡಿ ಭಾಗದ ಅಧ್ಯಕ್ಷರಾದ ಶೇಖರ್ ಶೆಟ್ಟಿ, ದಯಾನಂದ ಆದರ್ಶ್ ಮತ್ತು ನೆಲ್ಲ್ಯಾಡಿಯ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರು, ಹಾಗೂ ಟ್ಯಾಕ್ಸಿ ಚಾಲಕ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
إرسال تعليق