ಪ್ರಾತಃಕಾಲ 6:57 ರ ವೃಶ್ಚಿಕಲಗ್ನದ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ.

ಕುಕ್ಕೆ ಸುಬ್ರಹ್ಮಣ್ಯ; ಮಾರ್ಗಶಿರ ಮಾಸ, ಶುಕ್ಲ ಪಕ್ಷದ,ಷಷ್ಠಿಯಾದ ನಾಳೆ (ಡಿ.7 )ದಿನ ಪ್ರಾತಃಕಾಲ 6:57 ರ ವೃಶ್ಚಿಕಲಗ್ನದ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ 
ಅದ್ದೂರಿಯ,ಬ್ರಹ್ಮರಥೋತ್ಸವ ಜರುಗಲಿದೆ.

ಶ್ರೀ ದೇವರು ರಥಾರೂಡರಾಗಿ ವೈಭವದದಿಂದ ರಥಬೀದಿಯಲ್ಲಿ, ಚತ್ರ, ಚಾಮರ,ವಾದ್ಯ ಸಕಲ 
ಶೋಡಶೋಪಚಾರಗಳೊಂದಿಗೆ
ಬ್ರಹ್ಮರಥದಲ್ಲಿ ಕಂಗೊಳಿಸಲಿದ್ದಾರೆ.

ಈ ಸಂದರ್ಭ ಗಣ್ಯರು, ಅಧಿಕಾರಿಗಳು, ಲಕ್ಷಾಂತರ ಸಂಖ್ಯೆಯಲ್ಲಿ ಶ್ರೀ ಸುಬ್ರಹ್ಮಣ್ಯ 
ಸ್ವಾಮಿ ದೇವರ ಭಗವದ್ಭಕ್ತರು ಪಾಲ್ಗೊಂಡು, ಬ್ರಹ್ಮ ರಥೋತ್ಸವ ಸಂಪನ್ನಗೊಳ್ಳಲಿದೆ.

Post a Comment

Previous Post Next Post