ಡಿ 25 ರಂದು ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಆಡಳಿತ ಕಛೇರಿ ಉದ್ಘಾಟನೆ, ವಾರ್ಷಿಕ ಕ್ರೀಡಾಕೂಟ.

ಕಡಬ;ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಹೊಸಮಠದದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದಲ್ಲಿ ಸಂಘದ ಆಡಳಿತ ಕಛೇರಿಯ ಉದ್ಘಾಟನಾ ಸಮಾರಂಭ ಹಾಗೂ ಸಮುದಾಯದ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟ ಡಿಸೆoಬರ್ 25 ನೇ ಬುಧವಾರ ನಡೆಯಲಿದೆ, ಎಂದು ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಹೇಳಿದರು.
ಅವರು ಶನಿವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಮುದಾಯದ  ಎಲ್ಲಾ ಜನರನ್ನು  ಒಗ್ಗೂಡಿಸುವ ಹಾಗೂ ಸಂಘಟನಾತ್ಮಕ ದೃಷ್ಠಿಯಿಂದ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ, ತಾಲೂಕಿನ 42 ಗ್ರಾಮಗಳಿಂದ ಸುಮಾರು ಆರು ಸಾವಿರ ಸಮಾಜ ಬಾಂಧವರು ಸೇರುವ ನಿರೀಕ್ಷೆಯಿದೆ ಎಂದರು.


 ಸದೃಢ ಸಮಾಜ ನಿರ್ಮಾಣ ಧ್ಯೇಯದೊಂದಿಗೆ ನಿರ್ಮಾಣವಾಗುತ್ತಿರುವ ಸಮುದಾಯ ಭವನದಲ್ಲಿ ಸಂಘದ ಕಛೇರಿ ಉದ್ಘಾಟನೆಯಾಗುತ್ತಿದ್ದು, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ದೈಪಿಲ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಅರ್ವಗುತ್ತು, ಬೆಂಗಳೂರಿನ ಉದ್ಯಮಿ ನಟರಾಜ್, ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ.ಕೆ. ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ಸಮುದಾಯದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಹೇಳಿದ ಸುರೇಶ್ ಗೌಡ ಸಮುದಾಯ ಭವನಕ್ಕೆ ಶಿಲಾನ್ಯಾಸ ನಡೆದು ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು. 
ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ತಾಲೂಕು ಉಪಾಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ, ಕಾರ್ಯದರ್ಶಿ  ಪ್ರಶಾಂತ್ ಪಂಜೋಡಿ,  ಮಹಿಳಾಘಟಕದ ಅಧ್ಯಕ್ಷೆ ವೀಣಾ ಕೊಲ್ಲೆಸಾಗು, ಯುವಘಟಕದ ಅಧ್ಯಕ್ಷ ಪೂರ್ಣೇಶ್ ಗೌಡ ಬಾಬ್ಲುಬೆಟ್ಟು, ವಿವಿಧ ಸಮಿತಿ ಪ್ರಮುಖರಾದ ಚಂದ್ರಶೇಖರ ಕೋಡಿಬೈಲು, ಗಣೇಶ್ ಕೈಕುರೆ, ಲಾವಣ್ಯ ಮಂಡೆಕರ, ಮೋಹನ ಕೋಡಿಂಬಾಳ, ರಂಜಿತ್ ಪದಕಂಡ, ಅಶೋಕ್ ಗೌಡ ಶೇಡಿ,  ಉಪಸ್ಥಿತರಿದ್ದರು.
Highlights 
ಹದಿನೈದು ಕೋಟಿ ವೆಚ್ಚದಲ್ಲಿ ಸಮುದಾಯ ಭವನ:
ಕಡಬ ತಾಲೂಕಿನ  ಒಕ್ಕಲಿಗ ಗೌಡ ಸಮುದಾಯದ ಮಹತ್ವಾಕಾಂಕ್ಷೆಯ ನೂತನ ಸಮುದಾಯ ಭವನ ಹದಿನೈದು ಕೋಟಿ ರೂ ವೆಚ್ಚದಲ್ಲಿ ಹೊಸಮಠ ಸೇತುವೆ ಬಳಿ ತಾಲೂಕಿನ ಅವಶ್ಯಕತೆಗಣುಗುಣವಾಗಿ ನಿರ್ಮಾಣವಾಗುತ್ತಿದೆ.   ಇದು ಕೇವಲ ಒಕ್ಕಲಿಗ ಸಮುದಾಯದವರಿಗೆ ಮಾತ್ರ ಸೀಮಿತವಾಗದೆ ಎಲ್ಲಾ ಸಮುದಾಯದ ಜನರಿಗೂ ಸಲ್ಲುವಂತಹ ಸಮುದಾಯ ಭವನವಾಗಲಿದೆ. ಇದರಲ್ಲಿ ಎರಡು ಸಭಾಭವನ, ವಾಣಿಜ್ಯ ಮಳಿಗೆ, ಕೃಷಿ ಚಟುವಟಿಕೆಗಳಿಗೆ ಬಳಸುವ ಉತ್ಪನ್ನಗಳ  ಮಳಿಗೆ, ಆರೋಗ್ಯ ಸಂಬಂಧಪಟ್ಟ ಕಛೇರಿಗಳನ್ನು ತೆರೆಯಲು ಉದ್ದೇಶಿಸಲಾಗಿದೆ.  ಈಗಾಗಲೇ ಶೇ 75 ರಷ್ಟು ಕಾಮಗಾರಿ ಮುಗಿದಿದ್ದು, ಕಳೆದ ವರ್ಷ ಶಿಲಾನ್ಯಾಸ ನೆರವೇರಿದ ಬಳಿಕ ಕಾಮಗಾರಿ ನಿರಂತ ಸಾಗುತ್ತಾ ಬಂದಿದೆ.ಇದಕ್ಕೆ ಆರ್ಥಿಕ ಕ್ರೂಡಿಕರಣ ಹಾಗೂ ಸಮಾಜ ಬಾಂಧವರನ್ನು ಈ ಕಾರ್ಯದಲ್ಲಿ ತೊಡಗಿಸಕೊಳ್ಳವಂತೆ ಮಾಡುವ ದೃಷ್ಠಿಯಿಂದ ೪೨ ಗ್ರಾಮಗಳ ಸಮುದಾಯದ ಸುಮಾರು ಹತ್ತು ಸಾವಿರ ಮನೆಗಳನ್ನು  ಸಂಪರ್ಕ ಮಾಡಲಾಗಿದೆ. ನಮ್ಮ ಈ ಕಾರ್ಯಕ್ಕೆ  ಸಮಾಜ ಬಾಂಧವರಿಂದ ಉತ್ತಮ ಸ್ಪಂದನೆ ದೊರೆತಿದೆ. ಜನಪ್ರತಿನಿಧಿಗಳಿಂದ ಹಾಗೂ ಸರಕಾರದ ಮಟ್ಟದಲ್ಲಿ ಅನುದಾನ ದೊರೆಯುವ ದೃಷ್ಠಿಯಿಂದ ಪ್ರಯತ್ನ ಸಾಗಿದೆ.  ಪ್ರತೀ ಗ್ರಾಮ, ವಲಯ, ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿಕೊಂಡು ಸಂಘಟನೆಯನ್ನು ಬಲಗೊಳಿಸಲಾಗುತ್ತಿದೆ. ಕಡಬ ತಾಲೂಕು ಮಟ್ಟದ ಸಮಿತಿ ರಚನೆಯಾದ ಬಳಿಕ ಸಮುದಾಯದ ಜನರ ಸಂಘಟನೆಗೆ ವೇಗ ಸಿಕ್ಕಿದೆ, ಡಿ 25 ರ ಕಾರ್ಯಕ್ರಮದ ಪೂರ್ವಭಾವಿಯಾಗಿ ಹೊಸಮಠದಲ್ಲಿ  ಪ್ರತೀ ಗ್ರಾಮದ ಸಮಾಜ ಬಂಧುಗಳು ಶ್ರಮದಾನದಲ್ಲಿ ಭಾಗವಹಿಸುತ್ತಿದ್ದಾರೆ . ಕಡಬದಲ್ಲಿ ಸ್ಪಂದನಾ ಸಹಕಾರ ಸಂಘ ರಚಿಸಲಾಗಿದೆ ಎಂದು ಸುರೇಶ್ ಗೌಡ ಹೇಳಿದರು.

Post a Comment

أحدث أقدم