ಸುಬ್ರಹ್ಮಣ್ಯ ಡಿ.13: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ತುಮಕೂರು, ನೇತ್ರಾವತಿ ವಲಯ ಮಂಗಳೂರು ವತಿಯಿಂದ ಡಿಸೆಂಬರ್ 29ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ರಥ ಬೀದಿಯಲ್ಲಿ ರಾಜ್ಯಮಟ್ಟದ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ನಡೆಯಲಿರುವುದು .ಈ ಯೋಗ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಾದ ಬೆಂಗಳೂರು ,ಮೈಸೂರು, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ,ಹಾಸನ ,ತುಮಕೂರು ಹಾಗೂ ಉಳಿದ ಕಡೆಗಳಿಂದ ಸುಮಾರು 3000 ಯೋಗ ಬಂಧುಗಳು ಭಾಗವಹಿಸಲಿರುವರು. ಸಾಮೂಹಿಕ ಯೋಗ ಕಾರ್ಯಕ್ರಮಗಳು ಬೆಳಗ್ಗೆ 5:00ಯಿಂದ 7 ಗಂಟೆ ತನಕ ನಡೆಯಲಿರುವುದು .ಕಾರ್ಯಕ್ರಮದ ಉದ್ಘಾಟನೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಅಧಿಕಾರಿ ಜುಬಿನ್ ಮಹಾಪಾತ್ರ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ನೆರವೇರಿಸಲಿರುವರು. ದೂರದ ಊರುಗಳಿಂದ ಬರುವ ಯೋಗ ಬಂದುಗಳಿಗೆ ತಂಗಲು ಶ್ರೀ ದೇವಳದ ಸಂಸ್ಥೆಗಳಲ್ಲಿ ,ಛತ್ರಗಳಲ್ಲಿ ವ್ಯವಸ್ಥೆ ಮಾಡಲಾಗುವುದು ,ಹಾಗೂ ಬೆಳಗಿನ ಉಪಹಾರವನ್ನು ಶ್ರೀ ದೇವಳದ ವತಿಯಿಂದ ನೀಡಲಿರುವರೆಂದು ಸಂಘಟಕರು ತಿಳಿಸಿರುತ್ತಾರೆ.
ಡಿ .29 ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾಜ್ಯಮಟ್ಟದ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ.
Newspad
0
Premium By
Raushan Design With
Shroff Templates
إرسال تعليق