ಸುಬ್ರಹ್ಮಣ್ಯ ಡಿ.1 :ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಏನೆಕಲ್ಲು ಬಾನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಪ್ರಿಂಟರ್ ನ್ನು ಶುಕ್ರವಾರ ಕೊಡುಗೆಯಾಗಿ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ ನಾಯರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಶಾಲಾ ಮೇಲುಸ್ತುವಾರಿ ಹಾಗೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಪೂಜಾರಿಮನೆ ,ಶಾಲಾ ಮುಖ್ಯ ಶಿಕ್ಷಕಿ ಜಾನಕಿ ,ಸುಬ್ರಹ್ಮಣ್ಯ ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ಭರತ್ ನೆಕ್ರಾಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರಾದ ಗೀತಾ ಹಾಗೂ ಸ್ಮಿತಾ ಎಸ್ ಡಿ ಎಂ ಸಿ ಸದಸ್ಯರುಗಳಾದ ರಾಮಚಂದ್ರ ,ಅಕ್ಷತಾ, ಗಾಯತ್ರಿ ,ಚೈತ್ರ, ಕಿರಣ್ ಪೂಜಾರಿ ಮನೆ, ಗಿರೀಶ್ ಪದ್ಮಡ್ಕ, ಲೋಕೇಶ್ ಕಲ್ಲೇರಿ, ಅಂಗನವಾಡಿ ಸಹಾಯಕಿ ಚಿತ್ರ, ಸಚಿನ್ ಕುಕ್ಕಪ್ಪನಮನೆ, ಚಿತ್ರ ಬೈರೂನೀ, ಹಾಗೂ ಹಿರಿಯ ವಿದ್ಯಾರ್ಥಿ ಗಳು ಪೋಷಕರು ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಬಾನಡ್ಕ ಶಾಲೆಗೆ ಪ್ರಿಂಟರ್ ಕೊಡುಗೆ.
Newspad
0
Premium By
Raushan Design With
Shroff Templates
إرسال تعليق