ಕುಕ್ಕೆ ಸುಬ್ರಹ್ಮಣ್ಯ, ಡಿ.1: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲೇ ಕಾಡಾನೆ ಓಡಾಟ ನಡೆಸಿದ ಘಟನೆ ಭಾನುವಾರ ಸಂಜೆ ವೇಳೆ ಘಟನೆ ನಡೆದಿದ್ದು.
ತಕ್ಷಣ ಪುತ್ತೂರು ವಿಭಾಗಾಧಿಕಾರಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆಡಳಿತ ಅಧಿಕಾರಿಗಳು ಜುಬಿನ್ ಮಹಾ ಪಾತ್ರ ಅವರು.
ಸಾರ್ವಜನಿಕರ ಹಾಗೂ ಭಗವದ್ಭಕ್ತರ ರಕ್ಷಣೆ ಹಾಗೂ ಯಾವುದೇ ಕಹಿತಕರ ಘಟನೆ ನಡೆಯದಂತೆ ಸಿಬ್ಬಂದಿಗಳನ್ನು ನೇಮಿಸಲು ಅರಣ್ಯಾಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮ ಜೊತೆ ಮಾತನಾಡಿದ ಆಡಳಿತ ಅಧಿಕಾರಿಗಳು, ಸಾರ್ವಜನಿಕರಿಗೆ ಆನೆ ಇರುವುದು ಕಂಡು ಬಂದರೆ ತಕ್ಷಣ ಅರಣ್ಯ ಇಲಾಖೆಯ ಈ ಕೆಳಗಿನ ಫೋನ್ ಸಂಖ್ಯೆಗೆ ಸಂಪರ್ಕಿಸಿ ತಿಳಿಸಬೇಕು ಹಾಗೂ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ಮಹೋತ್ಸವ ಇರುವ ಕಾರಣ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದೆ,
ಒಂದು ವೇಳೆ ಆನೆ ರಥ ಬೀದಿಯಲ್ಲಿ ಸಂಚರಿಸಿದರೇ, ಭಕ್ತರಿಗೆ ಅದು ದೇವಾಲಯದ ಆನೆಯೋ? ಕಾಡಾನೆಯೋ? ಎಂಬ ವಿಚಾರ ತಿಳಿಯದೆ ಆನೆಗೆ ನಮಸ್ಕಾರ ಮಾಡಲು ಆಶೀರ್ವಾದ ಪಡೆಯಲು ತೆರಳುತ್ತಾರೆ.
ಈ ಬಗ್ಗೆ ದೇವಸ್ಥಾನದ ವತಿಯಿಂದ ಧ್ವನಿವರ್ಧಕದ ಮೂಲಕ ಭಗವದ್ಭಕ್ತರಿಗೆ ಸೂಚನೆಯನ್ನು ನೀಡಲಾಗುತ್ತಿದೆ.
ಕಾಡಾನೆ ಕಂಡು ಬಂದರೆ ಸಂಪರ್ಕ ಮಾಡಬೇಕಾದ ಮೊಬೈಲ್ ಸಂಖ್ಯೆ ಈ ರೀತಿ ಇದೆ.
Sathya Narayan +919449904151,
Dinesh Beat Officer 9148126362,
Subrhamanya police.94808 05366.
إرسال تعليق