ಕುಕ್ಕೆ ಸುಬ್ರಹ್ಮಣ್ಯ ; ಡಿ,25. ರಜೆ, ವರ್ಷಾಂತ್ಯ, ಹೆಚ್ಚಿನ ಸಂಖ್ಯೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರು.
ಅಯ್ಯಪ್ಪ ವೃತದಾರಿಗಳು,ಶಾಲಾ ,ಕಾಲೇಜು ಮಕ್ಕಳು,ಹೀಗೆ ಕುಕ್ಕೆಗೆ ಬರುವವರು ಬಸ್ ಹಾಗೂ ಇನ್ನಿತರ ವಾಹನಗಳಲ್ಲಿ ಆಗಮಿಸುತ್ತಾರೆ.
ಬಸ್ ಹಾಗೂ ವಾಹನಗಳನ್ನು ರಸ್ತೆ ಬದಿಯಲ್ಲಿ , ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿ ಅಡುಗೆ ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತಿದೆ.ಇದರಿಂದ ಯಾರಿಗೂ ಸಮಸ್ಯೆ ಅಲ್ಲ.
ಊಟ ಮಾಡಿದ ಮೇಲೆ ಉಳಿದ ತ್ಯಾಜ್ಯ, ಪ್ಲಾಸ್ಟಿಕ್,ಊಟ ಮಾಡಿದ ತಟ್ಟೆ ಗಳನ್ನು,ರಸ್ತೆ ಬದಿಯಲ್ಲಿ, ಚರಂಡಿಯಲ್ಲಿ ಎಸೆದು ಹೋಗುತ್ತಿದ್ದಾರೆ. ತ್ಯಾಜ್ಯಗಳನ್ನು ಎಸೆಯುವುದರಿಂದ ಸಮಸ್ಯೆಯಾಗುತ್ತಿದೆ.
ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪ ಆಗಿದ್ದರು ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅಬಿವೃದ್ಧಿ ಅಧಿಕಾರಿ ಹಾಗೂ ಆಡಳಿತ ಕಮಿಟಿ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಇಂದು ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ಸೇತುವೆಯಿಂದ ಕುಲ್ಕುಂದ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಬಸ್ ನಿಲ್ಲಿಸಿ ಅಡುಗೆ ಮಾಡುತ್ತಿರುವ ದೃಶ್ಯ ಕಂಡು ಬಂತು. ಬಸ್ ಹೋದ ಸ್ವಲ್ಪ ಸಮಯದಲ್ಲಿ ಬಂದು ವೀಕ್ಷಿಸಿದಾಗ ಆ ಬಸ್ಸಿನಲ್ಲಿ ಇದ್ದವರೆಲ್ಲ ತಾವು ಊಟ ಮಾಡಿದ ತಟ್ಟೆಗಳನ್ನು ಉಳಿದ ಆಹಾರಗಳನ್ನು ನೀರಿನ ಬಾಟಲ್ ಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಯಲ್ಲಿ ಎಸೆದಿರುವುದು ಕಂಡುಬಂತು.
ಕುಕ್ಕೆ ಸುಬ್ರಮಣ್ಯ ಸ್ವಚ್ಛತೆ ದೃಷ್ಟಿಯಿಂದ ಆದಷ್ಟು ಬೇಗ ಸುಬ್ರಮಣ್ಯ ಗ್ರಾಮ ಪಂಚಾಯತ್ ಹಾಗೂ ಅಭಿವೃದ್ಧಿ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವಾಹನಗಳಲ್ಲಿ ಬಂದು ರಸ್ತೆ ಬದಿಯಲ್ಲಿ, ಪಾರ್ಕಿಂಗ್ ಸ್ಥಳಗಳಲ್ಲಿ, ಅಡುಗೆ ಮಾಡಿ ಉಳಿದ ತ್ಯಾಜ್ಯ ಗಳನ್ನು ಎಸೆಯಂತೆ ಎಚ್ಚರಿಸಬೇಕು ಹಾಗೂ ಎಸೆದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮಾಧ್ಯಮದ ಮೂಲಕ ಸ್ಥಳೀಯ ಆಡಳಿತಕ್ಕೆ ತಿಳಿಸಿದ್ದಾರೆ.
إرسال تعليق