ಏನಕ್ಕಲ್ ರೈತ ಯುವಕ ಮಂಡಲ ಸಭಾಭವನಕ್ಕೆ ಪೆಡಸ್ಟಲ್ ಫ್ಯಾನ್ ಕೊಡುಗೆ.

ಸುಬ್ರಹ್ಮಣ್ಯ ;ಜ.22: ಎನೇಕಲ್ ರೈತ ಯುವಕ ಮಂಡಲದ ಸಭಾಭವನಕ್ಕೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಫೆಡಸ್ಟಲ್ ಫ್ಯಾನ್ ಅನ್ನು ರವಿವಾರ ನಡೆದ ಸಮಾರಂಭದಲ್ಲಿ ಕೊಡುಗೆಯಾಗಿ ನೀಡಲಾಯಿತು.
ಏನಕ್ಕಲ್ಲ ರೈತ ಯುವಕ ಮಂಡಲದ ಕಟ್ಟಡ ಸಮಿ ರಚನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಅವರು ಸುಬ್ರಮಣ್ಯ ರೋಟರಿ ಕ್ಲಬ್ ಪ್ರಯೋಜಕರಾದ ಜೊನಲ್ ಲೆಫ್ಟಿನೆಂಟ್ ವಿಶ್ವನಾಥ ತೋಟ ಹಾಗೂ ಸದಸ್ಯ ದಿನೇಶ್ ಎಣ್ಣೆಮಜಲ್ ಅವರಿಂದ ಕೊಡುಗೆಯಾಗಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್ ಪೂರ್ವ ಅಧ್ಯಕ್ಷರುಗಳಾದ ಶಿವರಾಮ ಏನೇಕಲ್, ಮೈಲಪ್ಪ ಸಂಕೇಶ, ಇನ್ನರ್ವೇಲ್ ಕಾರ್ಯದರ್ಶಿ ಚಂದ್ರ ಹೊನ್ನಪ್ಪ, ಇನ್ನರ್ವೆಲ್ ಪೂರ್ವ ಅಧ್ಯಕ್ಷ ಲೀಲಾ ಕುಮಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏನೇಕಲ್ಲು ಕೇಂದ್ರದ ಅಧ್ಯಕ್ಷ ಲಕ್ಷ್ಮಣಗೌಡ ,ಮುಖ್ಯ ಅತಿಥಿ ಸುಬ್ರಹ್ಮಣ್ಯ ಪ್ರಾಪ್ತಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ, ನೇತ್ರ ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿಗಳು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Post a Comment

أحدث أقدم