ಕಡಬ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ರಮೇಶ್ ಕಲ್ಪುರೆ ಆಯ್ಕೆ.

ಕಡಬ; ಕಡಬ ತಾಲೂಕಿನ ಪ್ರತಿಷ್ಠಿತ ಕಡಬ ಕೃಷಿ ಪತ್ತಿನ ಸಹಕಾರಿ ಸಂಘದ 2025ರ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ರಮೇಶ್ ಕಲ್ಪುರೆ ಆಯ್ಕೆಯಾಗಿದ್ದಾರೆ ಹಾಗೂ ಉಪಾಧ್ಯಕ್ಷರಾಗಿ ಎ ಪಿ ಗಿರೀಶ್ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾದ ತಮ್ಮಯ್ಯ ಗೌಡ ಸುಳ್ಯ, ಪುರುಷೋತ್ತಮ ಕಲ್ಲಂತಡ್ಕ, ರಘುಚಂದ್ರ ಗೌಡ ಕೊಣಾಜೆ, ರಾಮಚಂದ್ರ ಗೌಡ ಎಲುವಾಳೆ, ಲತಾ ರೈ ಎ., ವಸಂತಿ ಗೌಡ ಪುಯಿಲ, ಹರಿಶ್ಚಂದ್ರ ಪಿ., ಸತೀಶ್ಚಂದ್ರ ರೈ ಮೈಕಾಜೆ, ಸದಾನಂದ ಪಿ., ತನಿಯಪ್ಪ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪ್ರದೀಪ್ ಉಪಸ್ಥಿತರಿದ್ದರು. ಸಹಕಾರ ಸಂಘಗಳ ಪುತ್ತೂರು ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್. ಅವರು ಚುನಾವಣ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. 

Post a Comment

أحدث أقدم