ಏನೇಕಲ್ ನಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟನೆ.

ಸುಬ್ರಹ್ಮಣ್ಯ ಜ.19: ನಮಗೆ ನಮ್ಮ ಜೀವನದಲ್ಲಿ ಎರಡು ಕಣ್ಣುಗಳು ಎಷ್ಟು ಮುಖ್ಯವೋ ಅಷ್ಟೇ ಅದನ್ನ ಕಾಪಾಡಿಕೊಂಡು ಬರುವುದು ಕೂಡ ಮುಖ್ಯ .ರೋಟರಿ ಅಂತಹ ಅಂತರಾಷ್ಟ್ರೀಯ ಸಂಸ್ಥೆ ಸಮಾಜದಲ್ಲಿ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ಆರೋಗ್ಯದ ಕಡೆ ಹೆಚ್ಚು ಗಮನವಿಟ್ಟು ಆರೋಗ್ಯ ತಪಾಸಣೆ ಶಿಬಿರ, ಕಣ್ಣಿನ ತಪಾಸಣಾ ಶಿಬಿರ ನಡೆಸುತ್ತಾ ಬಂದಿರುವುದು ಶ್ಲಾಘನೀಯ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸುಬ್ರಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾl ತ್ರಿಮೂರ್ತಿ ಹೇಳಿದರು.
ಅವರು ರವಿವಾರ ಏನಕ್ಕಲ್ಲಿನಲ್ಲಿ ರೋಟರಿ ಕ್ಲಬ್ ಸುಬ್ರಹ್ಮಣ್ಯ ,ಗ್ರಾಮ ಪಂಚಾಯತ್ ಸುಬ್ರಮಣ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯ, ಪುತ್ತೂರು ರೋಟರಿ ಕಣ್ಣಿನ ಆಸ್ಪತ್ರೆ ,ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ,ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂದತ್ವ ನಿವಾರಣ ವಿಭಾಗ) ಮಂಗಳೂರು, ಡಾ. ಬಿ ದಯಾನಂದ ಪೈ ಹಾಗೂ ಸತೀಶ ಪೈ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಸೆಂಚುರಿ ಗ್ರೂಪ್ ಬೆಂಗಳೂರು ,ರೈತ ಯುವಕ ಮಂಡಲ ಎನೇಕಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಏನಿಕ್ಕಲ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಘಟಕ ಇವುಗಳ ಸಂಯುಕ್ತ ಆಶಯದಲ್ಲಿ ಏನೇ ಕಲ್ ರೈತ ಯುವಕ ಮಂಡಲದ ಸಭಾಂಗಣದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಏನೆಕಲ್ ರೈತ ಯುವಕ ಮಂಡಲ ಕಟ್ಟಡ ಸಮಿತಿ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಪ್ರಸ್ತಾವನೆಯೊಂದಿಗೆ ಕಣ್ಣಿನ ಮಹತ್ವ ಹಾಗೂ ಅದರ ಸಂರಕ್ಷಣೆ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೆನೇಕಲ್ ಸಮಿತಿ ಅಧ್ಯಕ್ಷ ಲಕ್ಷ್ಮಣಗೌಡ ಸಂಕಡ್ಕ ರೋಟರಿ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ ಸುಬ್ರಹ್ಮಣ್ಯ ಇನ್ನರ್ವೇಲ್ ಕಾರ್ಯದರ್ಶಿ ಚಂದ್ರ ಹೊನ್ನಪ್ಪ, ನೇತ್ರಾಲಯದ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್ ಸ್ವಾಗತಿಸಿದರು .ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಶಿವರಾಮ ಏನಕ್ಕಲ್ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಸದಸ್ಯ ಪುನೀತ್ ಕರ್ನಾಜೆ ಧನ್ಯವಾದ ಸಮರ್ಪಿಸಿದರು ಶಿಬಿರದಲ್ಲಿ ಸುಮಾರು 50ರಿಂದ 60 ಫಲಾನುಭವಿಗಳು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಅದರಲ್ಲಿ 15 ಮಂದಿ ಚಿಕಿತ್ಸೆ ಗಾಗಿ ಮಂಗಳೂರಿಗೆ ತೆರಳೋ ಬಗ್ಗೆ ಮಾಹಿತಿ ಪಡೆದುಕೊಂಡರು.

Post a Comment

أحدث أقدم