ಕುಕ್ಕೆ: ಕಿರು ಷಷ್ಟಿ ದಿನದಂದು ಭಗವದ್ಭಕ್ತರ ಸಂಖ್ಯೆ ಹೆಚ್ಚಾಗಿತ್ತು.

ಕುಕ್ಕೆ ಸುಬ್ರಹ್ಮಣ್ಯ;ಜ. 5: ಕುಕ್ಕೆ ಸುಬ್ರಹ್ಮಣ್ಯದಲ್ಲಿಂದು ಕಿರುಷಷ್ಟಿ ಮಹೋತ್ಸವದ ಅಂಗವಾಗಿ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವಳದ ಒಳಾಂಗಣ ಹೊರಾಂಗಣ ಹಾಗೂ ಕ್ಷೇತ್ರದ ಎಲ್ಲಾ ಕಡೆಗಳಲ್ಲಿಯೂ ಭಕ್ತ ಸಂದಣಿ ಹಾಗೂ ವಾಹನ ಸಂದಣಿ ಕಂಡು ಬಂತು. ಕುಕ್ಕೆಯಲ್ಲಿ ಚಂಪಾ ಷಷ್ಟಿ ವಾರ್ಷಿಕ ಜಾತ್ರೋತ್ಸವ ಕಳೆದು ಒಂದು ತಿಂಗಳ ನಂತರದ ಕಿರು ಷಷ್ಟಿಯಲ್ಲಿ ಕೂಡ ದೂರದೂರುಗಳಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪ್ರಸಾದ ಹಾಗೂ ಅನ್ನಪ್ರಸಾದವನ್ನು ಪಡೆದು ಸಂತೃಪ್ತಿಗೊಳ್ಳುತ್ತಾರೆ ಶ್ರೀ ದೇವಳದ ಕಡೆಯಿಂದ ಭಕ್ತರಿಗೆ ತೊಂದರೆ ಆಗದ ಹಾಗೆ ಅನುಕೂಲಕರ ರೀತಿಯಲ್ಲಿ ದೇವರ ದರ್ಶನ, ದೇವರ ಪ್ರಸಾದ, ಹಾಗೂ ಭೋಜನ ಪ್ರಸಾದಕ್ಕೆ ವ್ಯವಸ್ಥೆಯನ್ನು ಕೈಗೊಂಡಿರುವರು. ಆದಿ ಸುಬ್ರಮಣ್ಯದಲ್ಲಿಯೂ ಕೂಡ ಅದೇ ರೀತಿಯ ಭಕ್ತಸಂದಣಿ ಕಂಡುಬಂತು. ಕ್ಷೇತ್ರದ ಎಲ್ಲಾ ವಸತಿ ಗೃಹಗಳು ತುಂಬಿದ್ದವು. ವಾಹನ ಸಂಚಾರದ ದಟ್ಟಣೆಯನ್ನು ಸುಬ್ರಹ್ಮಣ್ಯ ಪೊಲೀಸರು ಹಾಗೂ ಈ ದೇವಳದ ಸಿಬ್ಬಂದಿ ವರ್ಗ ನಿಯಂತ್ರಿಸಿದರು.

Post a Comment

Previous Post Next Post