ಸುಬ್ರಹ್ಮಣ್ಯ ಜ.18: ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಪ್ರಸಕ್ತ ಸಾಲಿನಲ್ಲಿ ಸುಬ್ರಮಣ್ಯ ದ ಆಸು ಪಾಸುಗಳಾದ ಹರಿಹರ ಕೊಲ್ಲಮಗರು ಮರ್ದಾಳ ಮುಂತಾದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು ನಾಲ್ಕು ಲಕ್ಷ ರೂಪಾಯಿಗಳ ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸಿರುತ್ತದೆ ಎಂದು ಕ್ಲಬ್ ಅಧ್ಯಕ್ಷ ರಾಜೇಶ್ ಏನ್ .ಎಸ್. ಶನಿವಾರ ಪತಿಗಗೋಷ್ಠಿಯಲ್ಲಿ ತಿಳಿಸಿರುತ್ತಾರೆ.
ಮರ್ಧಾಳದ ಬೆಥನಿ ಜೀವನ್ ಜ್ಯೋತಿ ವಿಶೇಷ ಚೇತನ ಮಕ್ಕಳ ಶಾಲೆಗೆ ಮಧ್ಯಾಹ್ನದ ಭೋಜನ ಅನ್ನದಾನಕ್ಕೆ 10000/= ರೂಗಳ ಧನಸಹಾಯವನ್ನು ಕಳೆದೆರಡು ವರ್ಷಗಳಿಂದ ನೀಡುತ್ತಾ ಬಂದಿರುತ್ತದೆ .ಹಾಗೆಯೇ ದೇವರ ಗದ್ದೆಯ ಕೊರಗಜ್ಜನ ಕಟ್ಟೆಯ ಮೇಲ್ಚಾವಣಿ ರಚಿಸಲು ಒಂದು ಲಕ್ಷ ಧನಸಹಾಯ ನೀಡಿರುತ್ತಾರೆ. ಹರಿಹರದ ಕ್ರೀಡಾ ಸಂಘದವರು ಖರೀದಿಸುವ ಆಂಬುಲೆನ್ಸ್ ಗೆ 50,000 /=ಧನಸಹಾಯ ನೀಡಿರುವರು ಕಲ್ಮಕೂರು ಗ್ರಾಮದ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಶ್ರೀಮತಿ ಪದ್ಮಾವತಿ ಅವರಿಗೆ ರೋ 10,000/= ಧನ ಸಹಾಯ ನೀಡಿರುವರ ಸುಬ್ರಹ್ಮಣ್ಯದ ಮೃತ ರಿಕ್ಷಾ ಚಾಲಕ ಪುಟ್ಟಣ್ಣನವರಿಗೆ ಗ್ರಹ ನಿರ್ಮಾಣಕ್ಕೆ 10000/= ಕಲ್ಲಾಜೆ ಅಂಗನವಾಡಿ ನಲಿಕಲಿಗೆ 5000 /=ಕಲ್ಲಮೊಗರು ಕೆವಿಜಿ ಸಂಸ್ಥೆಯಲ್ಲಿ ಓದುತ್ತಿರುವ ಬಡ 3 ಮಕ್ಕಳಿಗೆ 3000 /=ದಂತೆ ಏಳು ವಿದ್ಯಾರ್ಥಿಗಳಿಗೆ ರೂ 21000/= ಜಿಲ್ಲಾ ಕಾರ್ಯಕ್ರಮಗಳಿಗೆ 63000/= ಲೈನ್ಸ್ ಜಿಲ್ಲೆಗೆ 5,000 /=ಜಿಲ್ಲಾ ಪ್ರಾಜೆಕ್ಟಿಗೆ 5,000/= ನೀಡುತ್ತಾ ಬರಲಾಗಿದೆ ಎಂದವರು ತಿಳಿಸಿದರು.
ಸೋಮವಾರ ಕುಕ್ಕೆ ಸುಬ್ರಹ್ಮಣ್ಯ ಕ್ಲಬ್ಬಿಗೆ ಜಿಲ್ಲಾ ರಾಜಪಾಲರಾದ ಬಿ.ಎಮ್ .ಭಾರತಿ ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ರಥ ಅಲಂಕಾರದ ರೂವಾರಿ ತನಿಯಪ್ಪ ,ಅಂತರಾಷ್ಟ್ರೀಯ ಯೋಗ ಪ್ರಶಸ್ತಿ ವಿಜೇತ ಕುಮಾರಿ. ಗೌರಿತ ಮತ್ತು ವಿಠಲ ಮೂಲ್ಯ ಅವರುಗಳನ್ನು ಸನ್ಮಾನಿಸಲಾಗುವುದೆಂದು ರಾಜೇಶ್ ಏನ್. ಎಸ್ .ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ವಲಯ ಅಧ್ಯಕ್ಷ ಪ್ರೊ .ರಂಗಯ್ಯ ಶೆಟ್ಟಿಗಾರ್, ನಿಕಟ ಪೂರ್ವ ಅಧ್ಯಕ್ಷ ರಾಮಚಂದ್ರ ಪಳಂಗಾಯ, ಕಾರ್ಯದರ್ಶಿ ಕೃಷ್ಣ ಕುಮಾರ ಬಾಳುಗೋಡು, ಕೋಶಾಧಿಕಾರಿ ಮೋಹನ್ದಾಸ್ ರೈ ಉಪಸ್ಥಿತರಿದ್ದರು.
إرسال تعليق