ಶ್ರೀ ಹರಿಹರೇಶ್ವರ ಯಕ್ಷಗಾನ ಕಲಾಸಂಘದ ಸ್ಥಾಪಕಾಧ್ಯಕ್ಷ, ಹಿರಿಯ ಬಿಜೆಪಿ ಕಾರ್ಯಕರ್ತ ನಾರಾಯಣ ಭೀಮಗುಳಿ ನಿಧನ.

ಹರಿಹರ ಪಲ್ಲತ್ತಡ್ಕ ನಿವಾಸಿ ನಾರಾಯಣ ಭೀಮಗುಳಿ(52) ಅನಾರೋಗ್ಯದಿಂದ ಪೆ.6 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. 
ಇವರು ಶ್ರೀ ಹರಿಹರೇಶ್ವರ ಯಕ್ಷಗಾನ ಕಲಾ ಸಂಘದ ಸ್ಥಾಪಕಾಧ್ಯಕ್ಷ. ನಾಟಕ ಕಲಾವಿದರಾಗಿ, ಸಂಘಟಕರಾಗಿದ್ದರು. ಭಾರತೀಯ ಜನತಾ ಪಾರ್ಟಿ ಹಿರಿಯ ಕಾರ್ಯಕರ್ತರಾಗಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಬಲಶಾಲಿ ವಾರಪತ್ರಿಕೆ. ಕಡಲಕೇಸರಿ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಮೃತರು ತಂದೆ ಪುಟ್ಟಣ್ಣ ಗೌಡ ಸಹೋದರರಾದ ನಿತ್ಯಾನಂದ ಬೀಮಗುಳಿ, ಪತ್ರಕರ್ತ ಬಾಲಕೃಷ್ಣ ಭೀಮಗುಳಿ, ಪತ್ನಿ ಭವಾನಿ, ಪುತ್ರಿ ಹರ್ಷಿತ,ಪುತ್ರ ವಿನಿತ್ ಹಾಗು,ಕುಟುಂಬಸ್ಥರು ಬಂದುಗಳನ್ನು ಅಗಲಿದ್ದಾರೆ.

Post a Comment

أحدث أقدم