ಬೆಂಗಳೂರು; ಕುಕ್ಕೆ ಸುಬ್ರಮಣ್ಯ 180 ಕೋಟಿ ಮಾಸ್ಟರ್ ಪ್ಲಾನ್ ಕಾಮಗಾರಿ ಯೋಜನೆ 2008ನೇ ಇಸವಿಯಲ್ಲಿ ಜಾರಿಗೆ ಬಂದಿತ್ತು ಮೂರು ಹಂತದಲ್ಲಿ ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಸರಕಾರ ಕೈಗೆತ್ತಿಕೊಂಡಿತ್ತು.
ಮೊದಲನೇ ಹಂತದಲ್ಲಿ 60 ಲಕ್ಷ ರೂಪಾಯಿಗಳ ಕಾಮಗಾರಿ ನಡೆದಿದೆ, ಎರಡನೇ ಹಂತದ ಕಾಮಗಾರಿ ಇನ್ನಷ್ಟು ಬಾಕಿ ಇದೆ, ಮೂರನೇ ಹಂತದ ಕಾಮಗಾರಿ ಇನ್ನು ಪ್ರಾರಂಭವಾಗಬೇಕಿದೆ.
2019ನೇ ಇಸವಿಗೆ ಈ ಮೂರು ಹಂತದ ಕಾಮಗಾರಿಗಳು ಪೂರ್ಣಗೊಂಡು ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನುಕೂಲ ವಾಗಬೇಕಿದ್ದ ಸೌಲಭ್ಯಗಳು,
ನಾಲ್ಕು ವರ್ಷದಿಂದ ಯಾವುದೇ ಕಾಮಗಾರಿಗಳು ನಡೆಯದೆ ಸ್ಥಗಿತ ಗೊಂಡಿತ್ತು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಸಮಸ್ಯೆಗಳಾಗುತ್ತಿದೆ ಎಂದು ಮನಗಂಡು ಇದೀಗ ನೇಮಕಗೊಂಡಿರುವ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಸತೀಶ್ ಕುಜುಗೋಡು, ಲೋಲಾಕ್ಷ ಕೈಕಂಬ, ಪವನ್ ಸುಬ್ರಮಣ್ಯ, ಸುಬ್ರಹ್ಮಣ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕಡಬ ಕಾಂಗ್ರೆಸ್ ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ, ಕುಕ್ಕೆ ಸುಬ್ರಹ್ಮಣ್ಯ ಮಾಸ್ಟರ್ ಪ್ಲಾನ್ ಸಮಿತಿ ಮಾಜಿ ಸದಸ್ಯ ಶಿವರಾಂ ರೈ, ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ವೆಂಕಪ್ಪ ಗೌಡ,ಕಿಶೋರ್ ಆರಂಪಾಡಿ.
ಸುಬ್ರಹ್ಮಣ್ಯದ ನಿಯೋಗ ಬೆಂಗಳೂರಿಗೆ ತೆರಳಿ ಮಾನ್ಯ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಭೇಟಿ ಮಾಡಿ ಮೂರು ವರ್ಷದಿಂದ ಮಾಸ್ಟರ್ ಪ್ಲಾನ್ ಕಾಮಗಾರಿಯ ಬಗ್ಗೆ ಯಾವುದೇ ಸಭೆಗಳು ನಡೆದಿಲ್ಲ, ಡೈನಿಂಗ್ ಹಾಲ್ ಕಾಮಗಾರಿ, ಆಶ್ಲೇಷ ಬಲಿಮಂಟಪ, ವಸತಿ ಗೃಹಗಳ ನಿರ್ಮಾಣ, ರಥ ಬೀದಿಯಲ್ಲಿ ಪಾರಂಪರಿಕ ಕಲಾ ಕೃತಿಗಳ ನಿರ್ಮಾಣ, ನೂತನ ಪಾರ್ಕಿಂಗ್ ನಿರ್ಮಾಣ, ಪಾರ್ಕಿಂಗ್ ನಲ್ಲಿ ಕಾಂಪ್ಲೆಕ್ಸ್ ನಿರ್ಮಾಣ, ಸುಮಾರು 12 ಬಗೆಯ ಕಾಮಗಾರಿ ಗಳು ಸ್ಥಗಿತಗೊಂಡಿದೆ ಈ ಕಾಮಗಾರಿಗಳಿಗೆ ಮರುಚಾಲನೆ ನೀಡಬೇಕು ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರದಲ್ಲಿ ಭಕ್ತರಿಗೆ ಅನುಕೂಲಕ್ಕೆ ಕಾಮಗಾರಿಗಳು ನಡೆಯಬೇಕು ಮಾಸ್ಟರ್ ಪ್ಲಾನ್ ಕಾಮಗಾರಿ ಸ್ಥಗಿತಗೊಂಡಿದೆ ಶೀಘ್ರವಾಗಿ ಪ್ರಾರಂಭಿಸಬೇಕು ಎಂದು ಕೇಳಿಕೊಂಡಾಗ
ಫೆಬ್ರವರಿ 15ನೇ ತಾರೀಕು ಬೆಂಗಳೂರು ಮುಜರಾಯಿ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿ ನಿರ್ಣಯ ತೆಗೆದುಕೊಳ್ಳುವ ಎಂಬ ಭರವಸೆ ನೀಡಿರುತ್ತಾರೆ. ಆದ್ದರಿಂದ ಇಂದು ಮೂರು ಗಂಟೆ ಸುಮಾರಿಗೆ ಮುಜರಾಯಿ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
إرسال تعليق