ನೆಲ್ಯಾಡಿ ಶ್ರೀ ಶಬರೀಶ ಕಲಾ ಮಂದಿರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ, ಶಬರೀಶ ಶಾಖೆ ನೆಲ್ಯಾಡಿಯ ಮೊದಲನೇ ವರ್ಷದ ವಾರ್ಷಿಕೋತ್ಸವ ಹಾಗೂ ಭಾರತ ಮಾತಾ ಪೂಜನ ಕಾರ್ಯಕ್ರಮ ಮಾರ್ಚ್ 9 ರಂದು ನಡೆಯಿತು. ಉಪ್ಪಿನಂಗಡಿ ತಾಲ್ಲೂಕಿನ 6 ಶಾಖೆಗಳ ಯೋಗಬಂಧುಗಳಿಂದ ಭಜನಾ ಕಾರ್ಯಕ್ರಮ ಮತ್ತು ಶಾಖೆಯ ಯೋಗಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖೆಯ ಶಿಕ್ಷಕ, ಉಪ್ಪಿನಂಗಡಿ ತಾಲ್ಲೂಕು ವರದಿ ಪ್ರಮುಖ್ ಮುರಳಿ ಮೋಹನರವರು ವಹಿಸಿದ್ದರು. ವಾರ್ಷಿಕೋತ್ಸವದ ಹಾಗೂ ನಿತ್ಯ ಜೀವನದಲ್ಲಿ ಯೋಗದ ಮಹತ್ವದ ಬಗ್ಗೆ ಉಪನ್ಯಾಸಕ ಚೇತನ್ ಕುಮಾರ್ ಆನೆಗುಂಡಿ ಬೌದ್ದಿಕ್ ನಡೆಸಿಕೊಟ್ಟರು.ನೆಲ್ಯಾಡಿ ಅಯ್ಯಪ್ಪ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಕೆ. ಎಸ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು,ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಆಟೋ ಚಾಲಕಿ ಪ್ರೇಮರನ್ನು ಗೌರವಿಸಲಾಯಿತು
ರಾಷ್ಟ್ರಾಭಿಮಾನದ ಸಂಕೇತ ವಾದ ಭಾರತ್ ಮಾತಾ ಪೂಜನ ಕಾರ್ಯಕ್ರಮವನ್ನು ಗೋವಿಂದ ಪ್ರಸಾದ್ ಕಜೆಯವರು ನಡೆಸಿಕೊಟ್ಟರು.
ರವಿಚಂದ್ರ ಹೊಸವೊಕ್ಲು ಸ್ವಾಗತಿಸಿ ಅನೀಶ್ ಕುಮಾರ್ ವಾರ್ಷಿಕ ವರದಿಯನ್ನು ನೀಡಿದರು.ಯೋಗಬಂಧುಗಳಾದ ಸುಧಾ ಹಾಗೂ ವೇಣುಗೋಪಾಲ್ ಅನಿಸಿಕೆಯನ್ನು ವ್ಯಕ್ತಪಡಿಸಿದರು, ಗಣೇಶ್ ರಶ್ಮಿ ವಂದನಾರ್ಪಣೆ ಸಲ್ಲಿಸಿ ರಕ್ಷಿತಾ ನಿರೂಪಿಸಿದರು.
Post a Comment