ಮಾ. 9 ರಿಂದ ಸುಬ್ರಹ್ಮಣ್ಯದಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ.


ಸುಬ್ರಹ್ಮಣ್ಯ ಮಾ.7: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರೀ) ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ನಗರ ಕಡಬ ತಾಲೂಕು ಇದರ ಸಹಯೋಗದಲ್ಲಿ ಆರೋಗ್ಯ ಪೂರ್ಣ ಜೀವನಕ್ಕಾಗಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ ಮಾರ್ಚ್ 9 ಕ್ಕೆ ಉದ್ಘಾಟನೆಗೊಂಡು ನಿತ್ಯ ತರಗತಿಯು ಬೆಳಿಗ್ಗೆ ಗಂಟೆ 5:00 ರಿಂದ 6:30ರತನಕ ಜರಗಲಿರುವುದು.
ಮಧುಮೇಹ ,ರಕ್ತದೊತ್ತಡ, ಬೊಜ್ಜಿನ ಸಮಸ್ಯೆ ,ಮೂಲವ್ಯಾಧಿ, ಯಾಸಿಡಿಟಿ ,ಅಜೀರ್ಣ, ಸಂಧಿವಾತ, ನಿದ್ರಾಹೀನತೆ, ವಾತರೋಗ, ಮಾನಸಿಕ ಒತ್ತಡ, ಮಂಡಿ ನೋವು, ಮತ್ತು ಬೆನ್ನು ನೋವು ಇವುಗಳಿಗೆ ಸೂಕ್ತ ಚಿಕಿತ್ಸಾ ಕ್ರಮವನ್ನು ಯೋಗದ ಮೂಲಕ ನೀಡಿ ಗರಿಷ್ಠ ಪ್ರಮಾಣದಲ್ಲಿ ನಿಯಂತ್ರಿಸಬಹುದು .ಕೇಂದ್ರ ಸಮಿತಿಯಿಂದ ತರಬೇತಿ ಪಡೆದ ಶಿಕ್ಷಕರಿಂದ ತರಗತಿಗಳನ್ನು ನಡೆಸಲಾಗುವುದು. 10 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಸಿನವರು ಭಾಗವಹಿಸಬಹುದೆಂದು ಸಂಘಟ ಕರು ತಿಳಿಸಿರುತ್ತಾರೆ.

Post a Comment

Previous Post Next Post