ಕುಕ್ಕೆ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿವ್ಯಾಪ್ತಿಗೆ ಒಳಪಡುವ ,ಕೊರಗ ತನಿಯ ದೈವಸ್ಥಾನದ ಬಳಿ ಸ್ಥಳಾಂತರಿಸಲಾದ ದೇವರಗದ್ದೆ -ಮಾನಾಡು ನೂತನ ರಸ್ತೆಯನ್ನು ಸುಮಾರು 10ಲಕ್ಷ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಳಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಪುರೋಹಿತ ಶಂಕರ ಭಟ್ ರವರು ಧಾರ್ಮಿಕ ಪೂಜೆ,ಪ್ರಾರ್ಥನೆ ನೆರವೇರಿಸಿದರು.
ಸವಿತಾ ಭಟ್,ಸೌಮ್ಯ ಭರತ್, ಮಾಜಿ ಸದಸ್ಯ ಕೃಷ್ಣಮೂರ್ತಿ ಭಟ್,ದೇವಸ್ಥಾನದ ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯ ಪವನ್, ರವೀಂದ್ರ ರುದ್ರಪಾದ,ಕಿಶೋರ್ ಅರಂಪಾಡಿ ಗಣೇಶ,ಮೊದಲಾದವರು ಸೇರಿದಂತೆ ಸ್ಥಳೀಯ ಕೊರಗ ತನಿಯ ದೈವಸ್ಥಾನದ ಪ್ರಮುಖರಾದ ದಿನೇಶ್, ಲೋಕೇಶ್,ಲಕ್ಷ್ಮೀಶ, ಅಣ್ಣು, ಸುಬ್ರಹ್ಮಣ್ಯ ಮಾನಾಡು, ತಾರಾನಾಥ,ಪ್ರಶಾಂತಿ, ಯಶ್ವಥ್, ರವಿ ಅಗರಿಕಜೆ,, ಸುಬ್ರಹ್ಮಣ್ಯ ಶಬರಾಯ, ಗುತ್ತಿಗೆದಾರರಾದ ಅಮೃತ ಕನ್ಸ್ಟ್ರಕ್ಷನ್ ಅವಿನಾಶ್ ಪಳ್ಳಿಗದ್ದೆ ಮೊದಲಾದವರು ಉಪಸ್ಥಿತರಿದ್ದರು.
إرسال تعليق