ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕ ಸುಬ್ರಹ್ಮಣ್ಯ ಇದರ ವತಿಯಿಂದ ದಿನಾಂಕ 21 ಮಾರ್ಚ್ 2025 ರಂದು ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ ದಿನೇಶ ಪಿ ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಅದರ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯಾ ಅವರು ವಿದ್ಯಾರ್ಥಿ ಗಳಿಗೆ ಶಿಸ್ತು ,ಸಂಯಮ, ಆಹಾರ ಪದ್ಧತಿ, ವೈಜ್ಞಾನಿಕತೆ, ನಾಯಕತ್ವ ಗುಣ, ಸಮಯ ಪ್ರಜ್ಞೆ, ಸ್ಕೌಟ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮಹತ್ವದ ಬಗ್ಗೆ ಸ್ಫೂರ್ತಿದಾಯಕ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳು ಸಂವಾದದಿಂದಾದ ಅನುಭವಗಳನ್ನು ಹಂಚಿಕೊಂಡರು. ರೋವರ್ಸ್ ಮತ್ತು ರೇಂಜರ್ಸ್ ನ ನಿಪುನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನವನ್ನು ಪಿ .ಜಿ. ಆರ್ ಸಿಂಧ್ಯಾ ಅವರು ಮಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಆಯೋಜನ ಆಯುಕ್ತರಾದ ಶ್ರೀ ಭರತ್ ರಾಜ್ ಕೆ, ಪಂಜ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಶ್ರೀ ಮಾಧವ ಬಿ ಕೆ, ಉಪಾಧ್ಯಕ್ಷ ದಾಮೋದರ್ ನೇರಳ, ಹಾಗೂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಕೆ. ರಂಗಯ್ಯ ಶೆಟ್ಟಿಗಾರ್, ರೋವರ್ ಸ್ಕೌಟ್ ಲೀಡರ್ ಶ್ರೀ ಮನೋಹರ, ರೇಂಜರ್ ಲೀಡರ್ಸ್ಗಳಾದ ಪ್ರಮೀಳಾ ಎನ್ ಹಾಗೂ ಅಶ್ವಿನಿ ಎಸ್.ಎನ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರೋವರ್ ಸ್ಕೌಟ್ ಲೀಡರ್ ಶ್ರೀ ರಾಮ್ ಪ್ರಸಾದ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
إرسال تعليق