ಸುಬ್ರಹ್ಮಣ್ಯ ರೋಟರಿ ಕ್ಲಬ್: ಜಿಲ್ಲಾರಾಜ್ಯಪಾಲರ ಭೇಟಿಯ ಸಂದರ್ಭದಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳ ಉದ್ಘಾಟನೆ.

ಸುಬ್ರಹ್ಮಣ್ಯ, ಏಪ್ರಿಲ್ 5 – ಜನಸೇವೆ ಹಾಗೂ ಸಾಮಾಜಿಕ ಬದ್ಧತೆಗೆ ನಿಲ್ಲುವ ಸುಬ್ರಹ್ಮಣ್ಯ ರೋಟರಿ ಕ್ಲಬ್, ಈ ಬಾರಿ ಜಿಲ್ಲೆಯ ರಾಜ್ಯಪಾಲರ ಅಧಿಕೃತ ಭೇಟಿಯನ್ನು ಸದುಪಯೋಗ ಮಾಡಿಕೊಂಡು, ಗ್ರಾಮೀಣ ಅಭಿವೃದ್ಧಿಗೆ ಇನ್ನುಮುಂದುವರಿದ ಹೆಜ್ಜೆ ಹಾಕುತ್ತಿದೆ. ಏಪ್ರಿಲ್ 10 ರಂದು ನಡೆಯುವ ಜಿಲ್ಲಾರಾಜ್ಯಪಾಲರ ಭೇಟಿಯ ಸಂದರ್ಭದಲ್ಲಿ ಹಲವು ಮಹತ್ವದ ಸಮಾಜಮುಖಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು.



ಇವುಗಳಲ್ಲಿ ಪ್ರಮುಖವಾಗಿ, ಪಂಜ ಗ್ರಾಮದ ವಿಶೇಷಚೇತನ ಮಹಿಳೆ ಮೀನಾಕ್ಷಿ ಅವರಿಗೆ ನೂತನವಾಗಿ ನಿರ್ಮಿಸಿದ ಮನೆ ನಿರ್ಮಾಣಕ್ಕಾಗಿ ಅಗತ್ಯವಾದ ಮರ, ಕಿಟಿಕಿ, ಸಿಮೆಂಟ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಒದಗಿಸಲಾಗಿದ್ದು, ಇದು ಸಂಪೂರ್ಣವಾಗಿ ರೂ.1 ಲಕ್ಷ ವೆಚ್ಚದಲ್ಲಿ ನೆರವೇರಿಸಲಾಗಿದೆ.

ರೋಟರಿ ಕ್ಲಬ್‌ನ ಇತರ ಪ್ರಮುಖ ಯೋಜನೆಗಳು ಹೀಗಿವೆ:

ಕೊಂಬಾರು ಗ್ರಾಮದ  ಕೆಂಜಾಳ ಎಂಬಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ – ಸುಮಾರು ರೂ.1 ಲಕ್ಷ ವೆಚ್ಚದ ಈ ಕಾಮಗಾರಿ ಲೋಕಾರ್ಪಣೆಗೆ ಸಿದ್ಧವಾಗಿದೆ.

ಏನೆಕಲ್ಲು ಅಂಗನವಾಡಿಗೆ ಕ್ರೀಡಾ ಸಾಮಗ್ರಿಗಳ ಹಸ್ತಾಂತರ – ರೂ.50 ಸಾವಿರ ಮೌಲ್ಯದ ಸಾಮಗ್ರಿಗಳು ಪೂರೈಸಲಾಗುತ್ತಿದೆ.
ಏನೆಕಲ್ಲು ರೈತ ಯುವಕ ಮಂಡಳಿಗೆ ಶುದ್ಧ ಕುಡಿಯುವ ನೀರಿನ ಘಟಕ – ರೂ.30,000 ವೆಚ್ಚದಲ್ಲಿ ಸ್ಥಾಪನೆ.
ದಿವಂಗತ ರೀಕ್ಷಚಲಕ ಪುಟ್ಟಣ್ಣ ವಾಲಗದಕೇರಿ ಮನೆಗೆ ಶೌಚಾಲಯ ನಿರ್ಮಾಣ – ರೂ.30,000 ವೆಚ್ಚದಲ್ಲಿ ನಿರ್ಮಾಣ ಕಾರ್ಯಪೂರ್ಣಗೊಂಡಿರುತ್ತದೆ.

ದೇವರ ಹಳ್ಳಿಯಲ್ಲಿ ಟೈಲರಿಂಗ್ ತರಬೇತಿ ನೀಡುತ್ತಿರುವ– ಶಿಕ್ಷಕಿಗೆ ಆರು ತಿಂಗಳ ವೇತನಕ್ಕಾಗಿ  ರೂ.60,000 ಹಣ ನೀಡಲಾಗುತ್ತದೆ.

ಈ ಎಲ್ಲ ಕಾರ್ಯಕ್ರಮಗಳ ಸಮಾರೋಪವಾಗಿ, ಏನೆಕಲ್ಲು ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಸಂಜೆ 7 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನ ನಡೆಯಲಿದೆ. ಜೊತೆಗೆ ತೀರಾ ಹಿಂದುಳಿದ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯಧನ, ಅಗತ್ಯ ವಸ್ತುಗಳ ಹಸ್ತಾಂತರ ಕೂಡ ನಡೆಯಲಿದೆ.

ಈ ಕುರಿತು ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ನಾಯರ್ ಮಾತನಾಡಿದರು. ಈ ವೇಳೆ, ಪೂರ್ವ ಅಧ್ಯಕ್ಷರುಗಳಾದ ಗೋಪಾಲ ಎಣೆಮಜಲು, ಮಾಯಿಲಪ್ಪ ಸಂಕೇಶ, ಕಾರ್ಯದರ್ಶಿ ಚಿದಾನಂದ ಕುಳ, ಹಾಗೂ ಸದಸ್ಯ ನವೀನ್ ವಾಲ್ತಾಜೆ ಉಪಸ್ಥಿತರಿದ್ದರು.

Post a Comment

أحدث أقدم