ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ರಾಮನವಮಿಯ ಭಕ್ತಿಪೂರ್ಣ ಆಚರಣೆ- ಗಾಯನ ಮತ್ತು ಪ್ರವಚನ.

ಶ್ರೀ ಸುಬ್ರಹ್ಮಣ್ಯ ಮಠ ಮತ್ತು ದಾಸ ನಿವಾಸ ಕಲಾ ವೇದಿಕೆಯ ಸಹಯೋಗದಲ್ಲಿ ಏಪ್ರಿಲ್ 6 ರಂದು ಶ್ರೀ ರಾಮನವಮಿ ಪ್ರಯುಕ್ತ ಶ್ರೀ ರಾಮಗಾನೋತ್ಸವ ಕಾರ್ಯಕ್ರಮವನ್ನು ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.



ಈ ಸಂದರ್ಭದಲ್ಲಿ ಮಠದ ಪೀಠಾಧಿಪತಿ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಪ್ರವಚನ ನೀಡಿ, ರಾಮ ಅವತಾರದ ಮಹಾತ್ಮ್ಯವನ್ನು ವಿವರಿಸಿದರು.

ಶ್ರೀಗಳು ತಮ್ಮ ಪ್ರವಚನದಲ್ಲಿ, ಭಗವಂತನ ಅನೇಕ ಅವತಾರಗಳಲ್ಲೂ ರಾಮಾವತಾರ ವಿಶೇಷವಾದದ್ದು ಎಂದು ಹೇಳಿದರು. “ರಾಮನು ಒಬ್ಬ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ನಡೆದು, ಮನುಷ್ಯನಾಗಿ ಬದುಕಿದ ದೇವರ ಆದರ್ಶ ರೂಪ,” ಎಂದು ವಿವರಿಸಿದರು. ಅವರು ಮತ್ಸ್ಯ, ಕೂರ್ಮ, ನರಸಿಂಹ, ವಾಮನ, ಪರಶುರಾಮ, ಕೃಷ್ಣ ಮುಂತಾದ ಅನೇಕ ಅವತಾರಗಳ ಪ್ರಾಮುಖ್ಯತೆಯನ್ನೂ ವಿವರಿಸಿ, ರಾಮಾವತಾರವು ಜನಸಾಮಾನ್ಯರಿಗೆ ಸ್ಪಷ್ಟವಾಗಿ ಅರಿವಾದ ಮತ್ತು ಅನುಕರಣೀಯವಾದ ಅವತಾರವೆಂದು ಹೇಳಿದರು.

ರಾಮನು ರಾಜಕುಮಾರನಾಗಿ ಪಟ್ಟಾಭಿಷೇಕಕ್ಕೆ ಸಿದ್ಧನಾಗಿದ್ದರೂ, ತಂದೆಯ ಮಾತಿಗೆ ಕಿವಿಗೊಡಿಸಿ ವಿನಯದಿಂದ ಅರಣ್ಯವಾಸ ಸ್ವೀಕರಿಸಿದ ಮಹಾನ್ ವ್ಯಕ್ತಿತ್ವವಂತವನೆಂದು ಶ್ರೀಗಳು ವಿವರಿಸಿದರು. ಲಕ್ಷ್ಮಣನೊಂದಿಗೆ ಇರುವ ಆತ್ಮೀಯ ಸಂಬಂಧ, ಸೀತೆಯ ಪ್ರೀತಿ, ಹಾಗೂ ಶತ್ರುಗಳ ವಿರುದ್ಧ ಧರ್ಮಯುದ್ಧದಲ್ಲಿ ತೋರಿದ ಧೈರ್ಯವನ್ನೂ ಅವರು ಉಲ್ಲೇಖಿಸಿದರು.

“ರಾಮನು ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ಆದರ್ಶ — ವರ್ತನೆ, ನಡತೆ, ನುಡಿಯಲ್ಲಿ ಶುದ್ಧತೆಯ ಮಾದರಿ,” ಎಂದು ಅವರು ಹೇಳಿದರು. “ರಾಮನು ಮಾಡಿದಂತೆ ನಡಿದರೆ, ರಾಮನು ನುಡಿದಂತೆ ನುಡಿದರೆ ಮಾತ್ರ ನಿಜವಾದ ರಾಮಭಕ್ತರೆನಿಸಬಹುದು,” ಎಂಬ ಸಂದೇಶವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಭಕ್ತರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Post a Comment

أحدث أقدم