ಕಡಬ ತಾಲೂಕು ಬಲ್ಪ ಗ್ರಾಮದ ಎಣ್ಣೆಮಜಲು ನಿವಾಸಿ ಶ್ರೀಯುತ ಲೋಕೇಶ್ ಎಣ್ಣೆಮಜಲು ಮತ್ತು ಶ್ರೀಮತಿ ಉಷಾ ದಂಪತಿಗಳ ಪುತ್ರ ಆಕಾಶ್ ಎ.ಎಲ್ ಅವರು 2024–25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 617 ಅಂಕಗಳನ್ನು ಪಡೆದು ತಮ್ಮ ಕುಟುಂಬದವರಷ್ಟೆಲ್ಲದೆ ,ಇಡೀ ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ.
ಈ ಸಾಧನೆಯನ್ನು ಗೌರವಿಸಿ, ಸದಾಸಿದ್ದಿ ಮಿತ್ರ ಬಳಗದ ವತಿಯಿಂದ ಆಕಾಶ್ ಎ.ಎಲ್ ಅವರನ್ನು ಅವರ ಮನೆಗೆ ಭೇಟಿ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಮಿತ್ರ ಬಳಗದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದು, ಆಕಾಶ್ ಗೆ ಅಭಿನಂದನೆಗಳು ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಕೆಗಳನ್ನು ಸಲ್ಲಿಸಿದರು.
Post a Comment