ಭಕ್ತರ ನಂಬಿಕೆಯ ತಾಣವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಶ್ರದ್ಧೆಯಿಂದ ನಿರ್ಮಿಸಲಾಗುತ್ತಿರುವ ಬೆಳ್ಳಿರಥ ಇಂದು ಎಲ್ಲರ ಗಮನ ಸೆಳೆಯುತ್ತಿದೆ. ಒಂದು ಕೋಟಿ ರೂಪಾಯಿ ಮೌಲ್ಯದ ಈ ರಥವನ್ನು ಸುಳ್ಯದ ಪ್ರಸಿದ್ಧ ಶಿಕ್ಷಣ ತಜ್ಞರು, ಸಾಮಾಜಿಕ ಸೇವಕರಾದ ಡಾ. ಕೆ.ವಿ. ರೇಣುಕಾ ಪ್ರಸಾದ್ ಅವರು ತಮ್ಮ ಸೇವಾಭಾವದಿಂದ ನೀಡುತ್ತಿದ್ದಾರೆ.
ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷರೂ ಆಗಿರುವ ಡಾ. ಪ್ರಸಾದ್, ಕೆ.ವಿ.ಜಿ. ಸಮೂಹ ಸಂಸ್ಥೆಗಳ ಪ್ರತಿಷ್ಠಿತ ಮುಖ್ಯಸ್ಥರು ಹಾಗೂ ದಿ,ಕುರುಂಜಿಯ ವೆಂಕಟರಮಣ ಗೌಡರ ಪುತ್ರರಾಗಿದ್ದಾರೆ.
ಈ ನೂತನ ರಥ ನಿರ್ಮಾಣಕ್ಕೆ ದೇವಾಲಯದ ಆಡಳಿತ ಸಮಿತಿಯಿಂದ ಅಧಿಕೃತ ಅನುಮತಿ ಸಿಕ್ಕಿದ್ದು, ನಿನ್ನೆ ನಡೆದ ನೂತನ ವ್ಯವಸ್ಥಾಪನಾ ಸಮಿತಿಯ ಮೊದಲ ಸಭೆಯಲ್ಲೇ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದೊಂದು ಭಕ್ತಿಗೆ, ದೇವರ ಕ್ರಪೆಗೆ ಮತ್ತು ನಿಷ್ಠೆಯ ಸಾಕ್ಷಾತ್ಕಾರ ಎಂಬಂತೆ ಭಕ್ತರು ಅಭಿಪ್ರಾಯಪಡುತ್ತಿದ್ದಾರೆ.
ರಥ ನಿರ್ಮಾಣ ಮುಂದಿನ ವಾರದಲ್ಲಿ ಆರಂಭಗೊಳ್ಳಲಿದೆ. ಶಾಸ್ತ್ರೋಕ್ತ ಸಂಕಲ್ಪದೊಂದಿಗೆ ಚಾಲನೆ ನೀಡಲಾಗುವುದು. ಈ ಪವಿತ್ರ ಕಾರ್ಯಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ರಥಶಿಲ್ಪಿ ಲಕ್ಷ್ಮೀನಾರಾಯಣಚಾರ್ಯರ ಪುತ್ರ ರಾಜಗೋಪಾಲ್ ಆಚಾರ್ ನಿರ್ಮಾಣ ಮಾಡಲಿದ್ದಾರೆ.
ಎಷ್ಟು ಅದ್ಭುತವಾದ ವಿಷಯವಂದರೆ, ಈ ರಥವನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಿ ಮುಂದಿನ ಷಷ್ಠಿ ಜಾತ್ರೆಗೆ ದೇವರಿಗೆ ಸಮರ್ಪಿಸಲಾಗುವುದು.
"ದೇವಾಲಯದ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಭಾವನಾತ್ಮಕವಾಗಿ ಮಾಧ್ಯಮದೊಂದಿಗೆ ಮಾತನಾಡುತ್ತಾ, ‘ನಮ್ಮ ನೂತನ ಸಮಿತಿ ರಚನೆಯಾದು ಇನ್ನೂ ಕೆಲವೇ ದಿನಗಳೇ ಆದಿವೆ. ಇಂತಹ ಭಕ್ತಿಯಿಂದಲಾದ ಮಹತ್ತ್ವದ ದಾನವನ್ನು ಘೋಷಿಸಲು ಅವಕಾಶ ಸಿಕ್ಕಿರುವುದು ನಮ್ಮ ಸಮಿತಿಗೆ ಅಪಾರ ಗೌರವ. ಇದು ದೇವರ ಕೃಪೆಯ ಫಲವಾಗಿದೆ. ಅವರ ಇಚ್ಛೆಯಿಲ್ಲದೆ ಈ ಸಂಭಾವನೆ ಸಾಧ್ಯವಲ್ಲ’ ಎಂದು ಸಂತೋಷ ವ್ಯಕ್ತಪಡಿಸಿದರು."
ಈ ಸೇವಾ ಮಹೋತ್ಸವಕ್ಕೆ ಸಾಕ್ಷಿಯಾದವರಲ್ಲಿ:
ಅಶೋಕ್ ನೆಕ್ರಜೆ (ಸಮಿತಿ ಸದಸ್ಯ), ಅರವಿಂದ ಅಯ್ಯಪ್ಪ ಸುತಗುಂಡಿ (ಮುಖ್ಯ ಕಾರ್ಯನಿರ್ವಹಣಾಧಿಕಾರಿ), ಎಇಒ ಯೇಸುರಾಜ್, ಶಿಲ್ಪಿ ರಾಜಗೋಪಾಲ್ ಆಚಾರ್, ವಸಂತ ಕಿರಿಬಾಗ ,ದಿನೇಶ್ ಮಾಡ್ತೀಲಾ, ಸತೀಶ್ ಕುಜಗೂಡು, ಲೋಲಕ್ಷ ಕೈಕಂಬ, ಪವನ್ ಎಂ.ಡಿ., ಇಂಜಿನಿಯರ್ ಉದಯಕುಮಾರ್ ಸರಸ್ವತಿ, ಕಿಶೋರ್ ಆರಂಪಾಡಿ, ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಭಕ್ತನ ಹೃದಯದಿಂದ ಹರಿದು ಬರುವ ನಿಜವಾದ ಸೇವೆ – ಇದು ದೇವರ ಆಜ್ಞೆಗೂ ಸಮಾನ!
ಕುಕ್ಕೆ ರಥೋತ್ಸವದ ದಿನಗಳಲ್ಲಿ ದೇವರನ್ನು ಬೆಳ್ಳಿರಥದಲ್ಲಿ ದರ್ಶನ ಪಡೆಯುವ ಅದೃಷ್ಟ ಭಕ್ತರಿಗೆ ಸಿಗಲಿದೆ.
إرسال تعليق