ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶೀಘ್ರದಲ್ಲೇ ಬೆಳಗಿನ ಉಪಾಹಾರ ಯೋಜನೆ | ಭಕ್ತರಲ್ಲಿ ಸಂತೋಷ.

ಅಧ್ಯಕ್ಷರು ನಡೆಸಿದ ಮೊದಲ ಸಭೆಯಲ್ಲೇ ಭಕ್ತರಿಗೆ ಬಂಪರ್ ಸಡಗರ | ಬೆಳಗಿನ ಉಪಾಹಾರ ಯೋಜನೆ ಘೋಷಣೆ

ಕುಕ್ಕೆ ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರ ನೇತೃತ್ವದಲ್ಲಿ ನಡೆದ ಮೊದಲ ಸಭೆಯಲ್ಲೇ ಭಕ್ತರಿಗೆ ಸಂತೋಷದ ಸುದ್ದಿ ದೊರಕಿದೆ. ಸಭೆಯಲ್ಲಿ ಪ್ರಮುಖ ನಿರ್ಧಾರವಾಗಿ ಬೆಳಗಿನ ಉಪಾಹಾರ ಯೋಜನೆಯನ್ನು ಶೀಘ್ರ ಜಾರಿಗೆ ತರಲು ತೀರ್ಮಾನಿಸಲಾಗಿದೆ.

ಈ ಮೊದಲು ಮಧ್ಯಾಹ್ನ ಹಾಗೂ ರಾತ್ರಿ ಭೋಜನ ಪ್ರಸಾದ ಮಾತ್ರ ಲಭ್ಯವಿದ್ದರೆ, ಈಗ ಬೆಳಗ್ಗೆ ಉಪಾಹಾರವೂ ಸಿಗುವ ಮೂಲಕ ಭಕ್ತರಿಗೆ ಇನ್ನಷ್ಟು ಅನುಕೂಲವಾಗಲಿದೆ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿರುವುದರಿಂದ ಈ ಯೋಜನೆ ಬಹುಮಾನೀಯ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ.

ಮೆನು ಮತ್ತು ಸಮಯದ ಬಗ್ಗೆ ಅಂತಿಮ ನಿರ್ಧಾರ ಮುಂದಿನ ಸಭೆಗಳಲ್ಲಿ ತೆಗೆದುಕೊಳ್ಳಲಾಗುವುದು. ಈ ಯೋಜನೆಯ ಕಾರ್ಯರೂಪಕ್ಕೆ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಸತಿ ವ್ಯವಸ್ಥೆ ಮತ್ತು ಶೌಚಾಲಯಗಳ ಸಂಖ್ಯೆಯೂ ಹೆಚ್ಚಳವಾಗಬೇಕು ಎಂಬ ಬೇಡಿಕೆಯನ್ನು ಭಕ್ತರು ಮುಂದಿಟ್ಟಿದ್ದಾರೆ.

Post a Comment

أحدث أقدم