ಕುಕ್ಕೆ ಸುಬ್ರಹ್ಮಣ್ಯ, ಜೂನ್ 14:
ಪವಿತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಇಂದು ಬೆಳ್ಳಿರಥ ನಿರ್ಮಾಣದ ಪೂರ್ವಭಾವಿಯಾಗಿ ಶ್ರದ್ಧಾ ಭಾವಪೂರ್ಣ ವೀಳ್ಯ ನೀಡಿಕೆ ಕಾರ್ಯಕ್ರಮ ನಡೆಯಿತು. ಡಾ. ಕೆ.ವಿ. ರೇಣುಕಾ ಪ್ರಸಾದ್ ಹಾಗೂ ಅವರ ಕುಟುಂಬದವರು ಈ ದಾನ ಕಾರ್ಯಕ್ಕೆ ಮುಂದಾಗಿದ್ದು, ಸಂಪ್ರದಾಯದಂತೆ ರಥಶಿಲ್ಪಿ ರಾಜಗೋಪಾಲ್ ಆಚಾರ್ಯ ಅವರಿಗೆ ಗರ್ಭಗುಡಿಯ ಎದುರು ವೀಳ್ಯ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯವರು ಶ್ರದ್ಧಾ ಪೂರ್ವಕವಾಗಿ ವಿಶೇಷ ಪೂಜೆಗಳನ್ನು ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯರು, ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಮತ್ತು ಇತರ ಅಧಿಕಾರಿಗಳು ರಥ ನಿರ್ಮಾಣಕ್ಕೆ ಅಗತ್ಯ ಅನುಮತಿ ಪತ್ರವನ್ನು ಶಿಲ್ಪಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಸಾಂಕೇತಿಕವಾಗಿ ಬೆಳ್ಳಿ ಮತ್ತು ಮರವನ್ನು ಶಿಲ್ಪಿಗೆ ಹಸ್ತಾಂತರಿಸುವ ಮೂಲಕ ರಥ ನಿರ್ಮಾಣಕ್ಕೆ ಮುನ್ನೋಟ ನೀಡಲಾಯಿತು.
ಮಾಜೀ ಮಂತ್ರಿಗಳಾದ ರಮಾನಾಥ್ ರೈ
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ
ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ (ಪಂಚ ಗ್ಯಾರಂಟಿ ಸಮಿತಿ)
ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ
ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ ಜಿ
ವ್ಯವಸ್ಥಾಪನಾ ಸಮಿತಿ ಸದಸ್ಯರಾದ, ಸೀತಾರಾಮ ಎಡಪಡಿತ್ತಾಯ ,ಅಶೋಕ್ ನೇಕ್ರಾಜೆ, ಶ್ರೀಮತಿ ಸೌಮ್ಯ ಭರತ್, ಡಾ|ರಘು, ಶ್ರೀಮತಿ ಲೀಲಾ ಮನೋಹರ್,ಶ್ರೀಮತಿ ಪ್ರವೀಣ ರೈ ಮರುವಂಜ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ
ಮಾಜಿ ಅಧ್ಯಕ್ಷರು ನಿತ್ಯಾನಂದ ಮುಂಡೋಡಿ, ಮೋಹನ್ ರಾಮ್ ಸುಳ್ಳಿ
ರಥಶಿಲ್ಪಿ ರಾಜಗೋಪಾಲ್ ಆಚಾರ್
ನ್ಯಾಯವಾದಿ ವೆಂಕಪ್ಪ ಗೌಡ, ಮಾಸ್ಟರ್ ಪ್ಲಾನ್ ಸದಸ್ಯರಾದ ಅಚ್ಚುತ ಗೌಡ,
ಸತೀಶ್ ಕುಜುಗೊಡು, ಲೋಲಕ್ಷ ಕೈಕಂಬ, ಪವನ್ ಎಂ.ಡಿ ಮತ್ತು ಊರ ಪರ ಊರ ಗಣ್ಯರು ಭಾಗವಹಿಸಿದ್ದರು.
Post a Comment