ಟಿಂಟೆಡ್ ಗ್ಲಾಸ್ ವಿರುದ್ಧ ಮಂಗಳೂರು ನಗರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ – 223 ಪ್ರಕರಣ ದಾಖಲು, ₹1.11 ಲಕ್ಷದ ದಂಡ.

ಮಂಗಳೂರು, ಜೂನ್ 3, 2025:
ಮೋಟಾರು ವಾಹನ ಕಾಯ್ದೆಯಡಿಯಲ್ಲಿ ನಿಷಿದ್ಧವಾದ ಟಿಂಟ್ ಗ್ಲಾಸ್ (ಬ್ಲಾಕ್ ಫಿಲ್ಮ್/ಸನ್ ಫಿಲ್ಮ್) ಅಳವಡಿಸಿ ಸಂಚರಿಸುತ್ತಿರುವ ಕಾರುಗಳ ವಿರುದ್ಧ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದಿನಾಂಕ 02 ಮತ್ತು 03 ಜೂನ್ 2025 ರಂದು ವಿಶೇಷ ಜಂಟಿ ಕಾರ್ಯಾಚರಣೆ ನಡೆಸಲಾಯಿತು.

ಈ ಕಾರ್ಯಾಚರಣೆಯಲ್ಲಿ ಸಂಚಾರಿ ಪೊಲೀಸರು ಮತ್ತು ಕಾನೂನು ಸುವ್ಯವಸ್ಥೆ ಪೊಲೀಸರು ಭಾಗವಹಿಸಿ ಒಟ್ಟು 223 ಪ್ರಕರಣಗಳನ್ನು ದಾಖಲು ಮಾಡಿ, ರೂ. 1,11,500/- ದಂಡವನ್ನು ವಿಧಿಸಿದ್ದಾರೆ. ಜೊತೆಗೆ ಆರೋಪಿತರ ವಾಹನಗಳಲ್ಲಿ ಅಳವಡಿಸಲಾದ ಟಿಂಟೆಡ್ ಗ್ಲಾಸ್ ಮತ್ತು ಸ್ಟಿಕರ್‌ಗಳನ್ನು ತೆಗೆಸಲಾಗಿದ್ದು, ಚಾಲಕರಿಗೆ ಸೂಕ್ತ ಮಾಹಿತಿ ಮತ್ತು ಎಚ್ಚರಿಕೆಯನ್ನು ನೀಡಲಾಗಿದೆ.

ಇದಷ್ಟೇ ಅಲ್ಲದೇ, ಜೂನ್ 3ರಂದು ಪೊಲೀಸ್ ಆಯುಕ್ತ ಕಛೇರಿಯ ಸಭಾಂಗಣ ಮತ್ತು ಪೊಲೀಸ್ ಠಾಣೆಗಳಲ್ಲಿ ಕಾರು ಶೋ ರೂಮ್, ಅಕ್ಸೆಸರೀಸ್ ಶಾಪ್, ಗ್ಯಾರೆಜ್, ಸ್ಟಿಕರ್ ಅಂಗಡಿಗಳ ಮಾಲಕರೊಂದಿಗೆ ಸಭೆ ನಡೆಸಲಾಯಿತು. 
ಸಭೆಯಲ್ಲಿ, ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಟಿಂಟ್ ಗ್ಲಾಸ್ ಅಳವಡಿಸುವುದರಿಂದ ಅಪರಾಧಕ್ಕೆ ಗುರಿಯಾಗುವ ಸಾಧ್ಯತೆ ಇರುವುದರಿಂದ, ತಮ್ಮ ಅಂಗಡಿಗಳಿಗೆ ಬರುವ ಗ್ರಾಹಕರ ವಾಹನಗಳಿಗೆ ಹೆಚ್ಚುವರಿ ಟಿಂಟ್ ಅಳವಡಿಸಬಾರದೆಂಬ ಸೂಚನೆ ನೀಡಲಾಯಿತು.

ಪೊಲೀಸ್ ಇಲಾಖೆ ಈ ರೀತಿಯ ವಿಶೇಷ ಕಾರ್ಯಾಚರಣೆಗಳನ್ನು ಮುಂದಿನ ದಿನಗಳಲ್ಲಿ ಕೂಡ ಮುಂದುವರೆಸಲಿದೆ ಎಂದು ತಿಳಿಸಿದ್ದಾರೆ.

Post a Comment

Previous Post Next Post