ಕೊಂಬಾರು ಗ್ರಾಮದಲ್ಲಿ ಹೊಸ ಸೇತುವೆ ಕಾಮಗಾರಿಗೆ ಗುದ್ದಲಿಪೂಜೆಸೇತುವೆ ನಿರ್ಮಾಣಕ್ಕೆ ರಾಜ್ಯ ವಿಪತ್ತು ಉಪಶಮ ನಿಧಿಯಿಂದ ₹50 ಲಕ್ಷ ಅನುದಾನ.

ಕಡಬ: ಕೊಂಬಾರು ಗ್ರಾಮದ ಓಡೋಳಿ ಎಂಬಲ್ಲಿ ₹50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸೇತುವೆ ಕಾಮಗಾರಿಗೆ ಇಂದು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಗುದ್ದಲಿಪೂಜೆಯ ಮೂಲಕ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಕೊಂಬಾರು ಗ್ರಾಮ ಪಂಚಾಯತ್ ಅಧ್ಯಕ್ಷ ಮಧುಸೂದನ್ ಕೊಂಬಾರು, ಸದಸ್ಯರು, ಪಿಡಿಒ, ಇಂಜಿನಿಯರ್ ಭರತ್, ತಾಲೂಕು ಪಂಚಾಯತ್ ಅಧಿಕಾರಿಗಳು, ಹಾಗೂ ಊರಿನ ಪ್ರಮುಖರಾದ ಕೃಷ್ಣ ಶೆಟ್ಟಿ, ಮೆದಪ್ಪ ಡೆಪ್ಪುಣಿ, ವಾಡ್ಯಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು. ಸ್ಥಳೀಯ ರಸ್ತೆಯಿಂದ ಪ್ರಯೋಜನಪಡುವ ಫಲಾನುಭವಿಗಳು ಮತ್ತು ಗ್ರಾಮದ ಹಲವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸೇತುವೆ ಕಾಮಗಾರಿ ಪೂರ್ಣಗೊಂಡ ನಂತರ ಗ್ರಾಮದ ಸಂಪರ್ಕ ವ್ಯವಸ್ಥೆ ಸುಧಾರಣೆಯಾಗಲಿದ್ದು, ನಾಗರಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ಶಾಸಕಿ ಹೇಳಿದರು.

Post a Comment

Previous Post Next Post