ಯೋಗ ದಿನದ ಪ್ರಯುಕ್ತ ಆಲಂಕಾರು ಶ್ರೀ ಭಾರತಿ ಶಾಲೆಯಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ.

ಕಡಬ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮತ್ತು ಭಾರತೀಯ ಜನತಾ ಪಕ್ಷದ ವತಿಯಿಂದ ಆಲಂಕಾರು ಶ್ರೀ ಭಾರತಿ ಶಾಲೆಯಲ್ಲಿ ಜೂನ್ 21 ರಂದು ಬೆಳಿಗ್ಗೆ 5:00 ರಿಂದ 6:30ರ ವರೆಗೆ ಯೋಗ ದಿನಾಚರಣೆಯ ಅಂಗವಾಗಿ ಯೋಗಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, “ಯೋಗವು ನಮ್ಮ ಪಾರಂಪರಿಕ ಜೀವನ ಪದ್ಧತಿಯ ಆಧಾರವಾಗಿದೆ. ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಮತೋಲನದೊಂದಿಗೆ ನಿರ್ವಹಿಸಲು ಯೋಗದ ಪಾತ್ರ ಬಹುಮುಖ್ಯ. ನಿರಂತರ ಯೋಗಾಭ್ಯಾಸದಿಂದ ಮಾನವ ಜೀವನದಲ್ಲಿ ಶಾಂತಿ, ಸ್ಥೈರ್ಯ ಮತ್ತು ಆರೋಗ್ಯ ಪಡೆಯಲಾಗುತ್ತದೆ. ಪ್ರತಿ ವ್ಯಕ್ತಿಯೂ ಯೋಗವನ್ನು ತಮ್ಮ ದಿನಚರ್ಯದ ಭಾಗವನ್ನಾಗಿ ಮಾಡಿಕೊಂಡು ಜೀವನವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಬೇಕು,” ಎಂದು ಸಂದೇಶವನ್ನು ನೀಡಿದರು.

ಈ ಸಂದರ್ಭ ವಿವಿಧ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನದ ಮೌಲ್ಯವನ್ನು ವಿವರಿಸಿ ಕಾರ್ಯಕ್ರಮ ನಡೆಯಿತು.

Post a Comment

Previous Post Next Post